'ಜಾಧವ್' ವಿವಾದ: ಮೀನುಗಾರಿಕೆ ಕುರಿತ ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆ ರದ್ದು
ಕುಲ್'ಭೂಷಣ್ ಜಾಧವ್ ಪ್ರಕರಣ ಸಂಬಂಧ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಮೀನುಗಾರಿಕೆ ಕುರಿತಂತೆ ಪಾಕಿಸ್ತಾನ ಜೊತೆಗೆ ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು...
ನವದೆಹಲಿ: ಕುಲ್'ಭೂಷಣ್ ಜಾಧವ್ ಪ್ರಕರಣ ಸಂಬಂಧ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಮೀನುಗಾರಿಕೆ ಕುರಿತಂತೆ ಪಾಕಿಸ್ತಾನ ಜೊತೆಗೆ ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು ಭಾರತ ರದ್ದುಗೊಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೀನುಗಾರಿಕೆ ಸಂಬಂಧ ಉಭಯ ರಾಷ್ಟ್ರಗಳಲ್ಲಿ ಎದುರಾಗಿರುವ ಬಿಕ್ಕಟ್ಟು, ರಕ್ಷಣಾ ಕಾರ್ಯಾಚರಣೆ ಸಂಬಂಧ ಭಾರತದ ಅಧಿಕಾರಿಗಳು ಇದೇ ಏಪ್ರಿಲ್ 16 ರಿಂದ 19 ರವರೆಗೂ ಪಾಕಿಸ್ತಾನ ಕಡಲು ಭದ್ರತಾ ಪಡೆಯೊಂದಿಗೆ ಮಾತುಕತೆ ನಡೆಸಬೇಕಿತ್ತು.
ಜಾಧವ್ ಪ್ರಕರಣ ಸಂಬಂಧ ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನಲೆಯಲ್ಲಿ ರಕ್ಷಣಾ ಸಚಿವಾಲಯ ಈ ಬಗ್ಗೆ ಸ್ಪಷ್ಟ ಆದೇಶಗಳನ್ನು ನೀಡಿಲ್ಲ ಎಂದು ಕರಾವಳಿ ಪಡೆ ಮೂಲಗಳು ತಿಳಿಸಿವೆ.
ಜಾಧವ್ ಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಭಾರತ, ಇದು ಗಲ್ಲು ಶಿಕ್ಷೆಯಲ್ಲ. ಪೂರ್ವಯೋಜಿತ ಕೊಲೆಯಾಗುತ್ತದೆ ಎಂದು ಹೇಳಿತ್ತು.