ನವದೆಹಲಿ: ತ್ರಿವಳಿ ತಲಾಖ್ ನ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿರುವಾಗ, ಈ ವಿಷಯದಲ್ಲಿ ಕಾನೂನು ಜಾರಿಗೆ ಬರದ ಹೊರತು ನ್ಯಾಯ ಸಿಗುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷೆ ಶೈಶ್ಟಾ ಅಂಬರ್ ಹೇಳಿದ್ದಾರೆ.
ಮುಸಲ್ಮಾನ ಮಹಿಳೆಯರು ತ್ರಿವಳಿ ತಲಾಖ್ ವಿಚ್ಚೇದನ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೂ ಮುಸ್ಲಿಂ ಕಾನೂನು ಮಂಡಳಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗದ ಹೊರತು ಈ ಸಾಮಾಜಿಕ ಪಿಡುಗು ಕೊನೆಯಾಗುವುದಿಲ್ಲ. ಈ ವಿಚ್ಚೇದನ ವ್ಯವಸ್ಥೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಖಾಸಗಿ ಕಾನೂನು ಎಲ್ಲಾ ವಿಧದಲ್ಲಿಯೂ ನಿಷ್ಟ್ಪಯೋಜಕವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಜಾರಿಗೆ ಬರದಿದ್ದರೆ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿರುತ್ತದೆ ಎಂದು ಅಂಬರ್ ಅಭಿಪ್ರಾಯಪಟ್ಟರು.