ತ್ರಿವಳಿ ತಲಾಖ್ ನಂತರ, ಬಹುಪತ್ನಿತ್ವ ಪದ್ಧತಿಯನ್ನು ಕೂಡ ನಿಷೇಧಿಸಲು ಮುಸ್ಲಿಂ ಮಹಿಳೆಯರ ಒತ್ತಾಯ

ವಿವಾದಾತ್ಮಕ ತ್ವರಿತ ತ್ರಿವಳಿ ತಲಾಖ್ ನ್ನು ನಿಷೇಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ವಿವಾದಾತ್ಮಕ ತ್ವರಿತ ತ್ರಿವಳಿ ತಲಾಖ್ ನ್ನು ನಿಷೇಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ ಈ ಮಸೂದೆಯನ್ನು ಸ್ವಾಗತಿಸಿರುವ ಅನೇಕ ಮುಸ್ಲಿಂ ಮಹಿಳೆಯರು ಇದೀಗ ತಮ್ಮ ಸಮುದಾಯದಲ್ಲಿ ಪುರುಷರು ಬಹುಪತ್ನಿತ್ವ ಹೊಂದುವ ಪದ್ಧತಿಯನ್ನು ಕೂಡ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಲೋಕಸಭೆಯಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ 2017 ಮಸೂದೆ ಅಂಗೀಕಾರ ಬದಲಾವಣೆಗೆ ಹೊಸ ಆರಂಭವಾಗಿದ್ದು, ಗಂಡಂದಿರು ಪತ್ನಿಯರಿಂದ ತ್ವರಿತವಾಗಿ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದರಿಂದ ತಪ್ಪಿಸಿಕೊಳ್ಳಬಹುದು.
ಹೊಸ ಕಾನೂನಿನಲ್ಲಿ, ತ್ರಿವಳಿ ತಲಾಖ್ ಗಿಂತಲೂ ಕೆಟ್ಟ ಪದ್ಧತಿಯಾಗಿರುವ ಬಹುಪತ್ನಿತ್ವಕ್ಕೆ ಮುಸ್ಲಿಂ ಪುರುಷರಿಗೆ  ನಿಷೇಧ ಹೇರಬೇಕೆಂದು ಮಹಿಳೆಯರು ಒತ್ತಾಯಿಸುತ್ತಿದ್ದಾರೆ. 
ಮುಸ್ಲಿಂ ಧರ್ಮದಲ್ಲಿರುವ ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವ ಪದ್ಧತಿ ವಿರುದ್ಧ ಹೋರಾಡುತ್ತಿರುವ ನ್ಯಾಯಾಧೀಶೆಯರಾದ ಫರ್ಹಾ ಫೈಜ್, ರಿಜ್ವಾನ ಮತ್ತು ರಜಿಯಾ, ನಮ್ಮ ಧರ್ಮದಲ್ಲಿರುವ ಕೆಟ್ಟ ಪದ್ಧತಿಗಳ ವಿರುದ್ಧ ಎನ್ ಡಿಎ ಸರ್ಕಾರ ಹೋರಾಟವನ್ನು ಆರಂಭಿಸಿರುವುದು ಸಮಾಧಾನಕರ ವಿಷಯ ಎಂದು ಹೇಳಿದ್ದಾರೆ.
ಈ ಹೊಸ ಕಾನೂನು ಜಾರಿಗೆ ಬಂದರೆ ಮಸ್ಲಿಂರಲ್ಲಿ ಗಂಡಂದಿರು ತಮ್ಮ ಪತ್ನಿಯರಿಗೆ ತಲಾಖ್ ಇ ಬಿದ್ಧತ್ ಹೇಳುವುದು ತಪ್ಪುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com