ಅಮೆರಿಕ ಮೂಲದ ಸಾಫ್ಟ್ ವೇರ್ ಸಂಸ್ಥೆ ಸಿಎ ಟೆಕ್ನಾಲಜೀಸ್ ಚೀನಾದಲ್ಲಿ 300 ಜನರ ಸಂಶೋಧನಾ ಹಾಗೂ ಅಭಿವೃದ್ಧಿ ತಂಡವನ್ನು ನಿಯೋಜಿಸಿದೆ. ಆದರೆ ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಸುಮಾರು 2,000 ವೈಜ್ಞಾನಿಕ ಮತ್ತು ತಾಂತ್ರಿಕ ವೃತ್ತಿಪರರನ್ನು ನಿಯೋಜಿಸಿದ್ದು, ಭಾರತ ಇತ್ತೀಚಿನ ದಿನಗಳಲ್ಲಿ ಯುವಕರನ್ನು ಹೆಚ್ಚು ಆಕರ್ಷಿಸುತ್ತಿದೆ ಹೈ-ಟೆಕ್ ಹೂಡಿಕೆದಾರರನ್ನು ಸೆಳೆಯುವುದನ್ನು ಕಡಿಮೆ ಮಾಡಿಕೊಳ್ಳುವಂತಹ ಅಪಾಯವನ್ನು ಚೀನಾ ತಂದುಕೊಳ್ಳಬಾರದು ಚೀನಾ ತನ್ನ ಆವಿಷ್ಕಾರದ ಸಾಮರ್ಥ್ಯವನ್ನು ಉಳಿಸಿಕೊಳ್ಳಬೇಕಾದರೆ ಭಾರತದ ಹೈ-ಟೆಕ್ ಪ್ರತಿಭೆಗಳನ್ನು ತನ್ನತ್ತ ಸೆಳೆಯಬೇಕು ಎಂದು ಗ್ಲೋಬಲ್ ಟೈಮ್ಸ್ ಅಭಿಪ್ರಾಯಪಟ್ಟಿದೆ.