ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ, ಆಪ್ ಗೆ ಪ್ರತಿಪಕ್ಷ ಸ್ಥಾನ: ಸಮೀಕ್ಷೆ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದ್ದು, ಆಮ್ ಆದ್ಮಿ ಪಕ್ಷಕ್ಕೆ ಬಹುಮತ ದೊರೆಯಲಿದೆ ಎಂದು ಇಂಡಿಯಾ ಟು ಡೆ ನಡೆಸಿರುವ ಸಮೀಕ್ಷೆ ಹೇಳಿದೆ.
ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ, ಆಪ್ ಗೆ ಪ್ರತಿಪಕ್ಷ ಸ್ಥಾನ: ಸಮೀಕ್ಷೆ
ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದ್ದು, ಆಮ್ ಆದ್ಮಿ ಪಕ್ಷಕ್ಕೆ ಬಹುಮತ ದೊರೆಯಲಿದೆ ಎಂದು ಇಂಡಿಯಾ ಟು ಡೆ ನಡೆಸಿರುವ ಸಮೀಕ್ಷೆ ಹೇಳಿದೆ. 
ಎಕ್ಸಿಸ್ ಎಪಿಎಂ ಹಾಗೂ ಇಂಡಿಯಾ ಟುಡೆ ಸಮೂಹ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ 60-65 ಸ್ಥಾನ ಗಳಿಸಲಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷ 41-44 ಸ್ಥಾನಗಳನ್ನು ಪಡೆಯಲಿದೆ. 
ಆಡಳಿತಾರೂಢ ಶಿರೋಮಣಿ ಅಕಾಲಿ ದಳ(ಎಸ್ಎಡಿ)-ಬಿಜೆಪಿ ಮೈತ್ರಿ ಕೂಟ ಕೇವಲ 11-15 ಸ್ಥಾನ ಗಳಿಸಲಿದ್ದು 0-2 ಸ್ಥಾನಗಳನ್ನು ಇತರರ ಪಾಲಾಗಲುವ ಸಾಧ್ಯತೆ ಇದೆ. ಬಹುಮತ ಗಳಿಸುವ ಸಾಧ್ಯತೆ ಇರುವ ಕಾಂಗ್ರೆಸ್ ಪಕ್ಷ ಶೇ.37 ರಷ್ಟು ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷ ಶೇ.34 ರಷ್ಟು ಮತಗಳನ್ನು ಪಡೆಯಲಿದೆ, ಎಸ್ಎಡಿ-ಬಿಜೆಪಿಗೆ ಶೇ.25 ರಷ್ಟು ಮತಗಳು ದೊರೆಯಲಿದೆ ಎಂದು ಸಮೀಕ್ಷೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com