ಗಡ್ಡ ಶೇವ್ ಮಾಡಲು ನಕಾರ: ಗಂಡನ ಮೇಲೆ ಬಿಸಿ ನೀರು ಸುರಿದ ಪತ್ನಿ

ಗಡ್ಡ ಶೇವ್ ಮಾಡಲು ನಿರಾಕರಿಸಿದ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಪತ್ನಿಯೊಬ್ಬಳು ತನ್ನ ಪತಿ ಮೇಲೆ ಬಿಸಿ ನೀರು ಸುರಿದಿರುವ ಘಟನೆಯೊಂದು ಉತ್ತರಪ್ರದೇಶದ...
ಗಡ್ಡ ಶೇವ್ ಮಾಡಲು ನಕಾರ: ಗಂಡನ ಮೇಲೆ ಬಿಸಿ ನೀರು ಸುರಿದ ಪತ್ನಿ
ಗಡ್ಡ ಶೇವ್ ಮಾಡಲು ನಕಾರ: ಗಂಡನ ಮೇಲೆ ಬಿಸಿ ನೀರು ಸುರಿದ ಪತ್ನಿ
Updated on
ಅಲಿಗಢ್: ಗಡ್ಡ ಶೇವ್ ಮಾಡಲು ನಿರಾಕರಿಸಿದ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಪತ್ನಿಯೊಬ್ಬಳು ತನ್ನ ಪತಿ ಮೇಲೆ ಬಿಸಿ ನೀರು ಸುರಿದಿರುವ ಘಟನೆಯೊಂದು ಉತ್ತರಪ್ರದೇಶದ ಅಲಿಘಡ್ ಎಂಬಲ್ಲಿ ನಡೆದಿದೆ. 
ಸಲ್ಮಾನ್ ಶೋಷಣೆಗೊಳಗಾಗ ವ್ಯಕ್ತಿಯಾಗಿದ್ದು, ನಗ್ಮಾ ಬಿಸಿನೀರು ಹಾಕಿದ ಪತ್ನಿಯಾಗಿದ್ದಾಳೆ. ಧಾರ್ಮಿಕ ನಂಬಿಕೆ ಹಿನ್ನಲೆಯಲ್ಲಿ ಸಲ್ಮಾನ್ ಗಡ್ಡವನ್ನು ಶೇವ್ ಮಾಡಲು ನಿರಾಕರಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂಚಕ ಪತಿಯ ಮೇಲೆ ತೀವ್ರವಾಗಿ ಕೋಪಗೊಂಡಿದ್ದ ನಗ್ಮಾ ಇದ್ದಕ್ಕಿದ್ದಂತೆಯೇ ಬಿಸಿ ನೀರು ತಂದು ಸಲ್ಮಾನ್ ಮೇಲೆ ಸುರಿದಿದ್ದಾಳೆ. 
ಸಲ್ಮಾನ್ ಹಾಗೂ ನಗ್ಮಾ ಮದುವೆಯಾಗಿ 6 ತಿಂಗಳಾಗಿದೆ. ಸಲ್ಮಾನ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ನಗ್ಮಾಗೆ ಅಸಮಾಧಾನವಿದ್ದು, ಇಬ್ಬರ ನಡುವೆ ಈ ಬಗ್ಗೆ ಸಾಕಷ್ಟು ಜಗಳಗಳಾಗಿವೆ. ಮಾಡೆಲ್ ಗಳ ರೀತಿ ಡ್ರೆಸ್ ಸೆನ್ಸ್ ಹಾಗೂ ಅವರ ರೀತಿ ಸ್ಟೈಲಿಶ್ ಆಗಿ ಇರುವಂತೆ ಪ್ರತೀನಿತ್ಯ ಗಂಡನಿಗೆ ಬಲವಂತೆ ಮಾಡಿದ್ದಾಳೆ. ಇದಕ್ಕೆ ಸಲ್ಮಾನ್ ನಿರಾಕರಿಸಿದ್ದಾನೆ. ಈ ಹಿನ್ನಲೆಯಲ್ಲಿ ಗಂಡನ ಮೇಲೆ ಬಿಸಿ ನೀರು ಸುರಿದಿದ್ದಾಳೆಂದು ಪೊಲೀಸರು ಹೇಳಿದ್ದಾರೆ. 
ಡ್ರೆಸ್ ಸೆನ್ಸ್ ಹಾಗೂ ಸ್ಟೈಲಿಶ್ ಆಗಿರುವಂತೆ ಪ್ರತಿನಿತ್ಯ ನನ್ನ ಪತ್ನಿ ಬಲವಂತ ಮಾಡುತ್ತಿದ್ದಳು. ಇದಕ್ಕೆ ನಿರಾಕರಿಸಿದ್ದಕ್ಕೆ ಬಿಸಿ ನೀರು ಸುರಿದಳು. ನನ್ನ ಕಿರುಚಾಟ ಕೇಳಿ ಸ್ಥಳೀಯರು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಶೋಷಣೆಗೊಳಗಾದ ಸಲ್ಮಾನ್ ಹೇಳಿದ್ದಾರೆ. 
ಇದೀಗ ಮನನೊಂದಿರುವ ಸಲ್ಮಾನ್ ತನ್ನ ಪತ್ನಿಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com