ಮಿಸ್ ಆಕ್ಟೀವ್ ಪ್ರಶಸ್ತಿಯನ್ನು ವೀನಾಲಿ ಭಟ್ನಾಗರ್ ಅವರು ಪಡೆದಿದ್ದರೆ, ವಮಿಕ ನಿಧಿ ಬಾಡಿ ಬ್ಯೂಟಿಫುಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಹೊರ ಫಾರ್ಮೆಟ್ ಇದ್ದ ಕಾರಣ ಮಿಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯ ರ್ಪದರ್ಶನ 30 ರಾಜ್ಯಗಳಲ್ಲಿ ನಡೆದಿದೆ. ಪ್ರದರ್ಶನದಲ್ಲಿ ಅರುಣಾಚಲ ಪ್ರದೇಶ, ತ್ರಿಪುರ, ಉತ್ತರಾಖಂದ್, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಿಂದ ಯುವತಿಯರು ಭಾಗವಹಿಸಿದ್ದರು. ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸುವವರನ್ನು ಮಿಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯಲ್ಲಿ ಆಯ್ಕೆ ಮಾಡಲಾಗುತ್ತದೆ.