ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದಾಳಿ ಕುರಿತತೆ ರಕ್ಷಣಾ ಸಚಿವಾಲಯದ ಮೂಲಗಳು ಮಾಹಿತಿ ನೀಡಿದ್ದು, ಪೂಂಚ್ ಜಿಲ್ಲೆಯ ಮಜ್ಕೋಟ್ ಪ್ರದೇಶದಲ್ಲಿರುವ ಮೆಂಧಾರ್ ಸೆಕ್ಟರ್ ಬಳಿ ಬೆಳಿಗ್ಗೆ 8.40ರ ಸುಮಾರಿಗೆ ಪಾಕಿಸ್ತಾನ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ತಿಳಿಸಿದೆ.
ಪಾಕಿಸ್ತಾನ ಸೇನೆ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಆಟೋಮೆಟಿಸ್ ವೆಪನ್ಸ್ ಬಳಸಿ ಭಾರತೀಯ ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದೆ. ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ. ಪ್ರಸ್ತುತ ಸ್ಥಳದಲ್ಲಿ ಈಗಲೂ ಗುಂಡಿನ ಮೊರೆತದ ಶಬ್ಧಗಳು ಕೇಳಿ ಬರುತ್ತಿದೆ ಎಂದು ಹೇಳಿದೆ.