ಪದ್ಮಾವತಿ ಚಿತ್ರ ಪ್ರದರ್ಶಿಸುವ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ; ಬಿಜೆಪಿ ಶಾಸಕ

ಸಂಜಯ್ ಬನ್ಸಾಲಿ ನಿರ್ದೇಶಿಸಿರುವ ಪದ್ಮಾವತಿ ಚಿತ್ರವನ್ನು ಪ್ರದರ್ಶನ ಮಾಡುವ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆಂದು ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ...
ಪದ್ಮಾವತಿ ಚಿತ್ರದ ಪೋಸ್ಟರ್
ಪದ್ಮಾವತಿ ಚಿತ್ರದ ಪೋಸ್ಟರ್
Updated on: 
ತೆಲಂಗಾಣ; ಸಂಜಯ್ ಬನ್ಸಾಲಿ ನಿರ್ದೇಶಿಸಿರುವ ಪದ್ಮಾವತಿ ಚಿತ್ರವನ್ನು ಪ್ರದರ್ಶನ ಮಾಡುವ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆಂದು ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ. 
ಪದ್ಮಾವತಿ ಚಿತ್ರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪದ್ಮಾವತಿ ಚಿತ್ರವು ರಜಪೂತರ ಗೌರವಕ್ಕೆ ಸಂಬಂಧಿಸಿದ್ದಾಗಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ. 
ಪದ್ಮಾವತಿ ಚಿತ್ರವನ್ನು ಮೊದಲು ನಮಗೆ ತೋರಿಸಬೇಕು. ಚಿತ್ರದಲ್ಲಿ ಒಂದು ವೇಳೆ ರಜಪೂತರಿಗೆ ಅಗೌರವ ತೋರಿರುವುದು ಕಂಡು ಬಂದಿದ್ದೇ ಆದರೆ, ಚಿತ್ರವನ್ನು ಬಿಡುಗಡೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮಹಿಳೆಯರಿಗೆ ಅಗೌರವ ತೋರಿ ನಿರ್ದೇಶಕರು ದುಡ್ಡು ಮಾಡಲು ಯತ್ನ ನಡೆಸಿರುವುದೇ ಆಗಿದ್ದಲ್ಲಿ, ಎಲ್ಲರೂ ಒಗ್ಗಟಾಗಿ ನಿರ್ದೇಶಕರನ್ನು ಬಹಿಷ್ಕರಿಸಬೇಕು ಎಂದು ತಿಳಿಸಿದ್ದಾರೆ.  
ಹಿಂದೂ ಧರ್ಮವನ್ನು ಸಮರ್ಥಿಸಿಕೊಳ್ಳುವ ಎಲ್ಲರೂ ಒಂದುಗೂಡಬೇಕಿದ್ದು, ಕೇವಲ ನಿರ್ದೇಶಕರನ್ನಷ್ಟೇ ಬಹಿಷ್ಕರಿಸುವುದಲ್ಲದೆ, ಚಿತ್ರ ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕಿದೆ. ಚಿತ್ರದ ಮೂಲದ ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಯತ್ನ ನಡೆಸಲಾಗಿದ್ದು, ದೇಶದ ಗೌರವ, ಧರ್ಮ ಹಾಗೂ ಹಿಂದೂ ಸಮಾಜವನ್ನು ಕಾಪಾಡಲು ಯುವಕರು ಒಗ್ಗೂಡಬೇಕಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com