ಸೇನಾ ಮೂಲಗಳು ತಿಳಿಸಿರುವಂತೆ ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಕಣಿವೆ ರಾಜ್ಯದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿತ್ತು ಎಂದು ಶಂಕಿಸಲಾಗಿದೆ. ಇದೇ ಕಾರಣಕ್ಕೆ ಶಸ್ತ್ರ ಸಜ್ಜಿತ ಉಗ್ರರನ್ನು ಸಿದ್ಧ ಪಡಿಸಿ ದಾಳಿಗೆ ಮುಂದಾಗಿತ್ತು. ಆದರೆ ಭಾರತೀಯ ಸೈನಿಕರ ಸಮಯ ಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಭಾರಿ ಅನಾಹುತವನ್ನು ತಡೆದಂತಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಕಾಶ್ಮೀರದ ಡಿಜಿಪಿ ಎಸ್ ಪಿ ವಾಲಿದ್ ಅವರು ಮಾಹಿತಿ ನೀಡಿದ್ದು, ಹಂದ್ವಾರದ ಮಾಗನ್ ಪ್ರದೇಶದಲ್ಲಿ ಅವಿತಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.