1864 ನವೆಂಬರ್ 22ರಂದು ಮುಂಬೈಯಲ್ಲಿ ಜನಿಸಿದ ರುಕ್ಮಾಬಾಯಿ ಅವರು, 1886ರಲ್ಲಿ ವೈದ್ಯಕೀಯ ಪದವಿ ಪಡೆದ ಅವರು, 1889 ರಲ್ಲಿ ವೈದ್ಯಕೀಯ ಉನ್ನತ ವ್ಯಾಸಂಗಕ್ಕೆ ಸೇರಿದರು. 1894ರಲ್ಲಿ ಅವರು ಉನ್ನತ ವೈದ್ಯಕೀಯ ಪದವಿ ಪಡೆದರು. ರುಕ್ಮಾಬಾಯಿ ಅವರು ಸುಮಾರು 50 ವರ್ಷಕ್ಕೂ ಅಧಿಕ ಕಾಲ ವೈದ್ಯಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದರಾದರೂ ಈ ಬಗ್ಗೆ ದಾಖಲೆಗಳು ಲಭ್ಯವಾಗಿರಲಿಲ್ಲ. ರುಕ್ಮಾಬಾಯಿ ಅವರ ತಾಯಿಯ ವಿವಾಹವಾದಾಗ ತಾಯಿಗೆ 14ವರ್ಷ, ರುಕ್ಮಾಬಾಯಿ ಅವರು ಜನಿಸಿದಾಗ ಅವರಿಗೆ ಕೇವಲ 15 ವರ್ಷ ವಯಸ್ಸಾಗಿತ್ತು. ರುಕ್ಮಾಬಾಯಿ ಎರಡು ವರ್ಷವಿರುವಾಗಲೇ ತಾಯಿ ವಿಧವೆಯಾದರು.