ಅ.13ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ ಬಂದ್

ತಮ್ಮ ಬಹುದಿನಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 13ರಂದು ದೇಶಾದ್ಯಂತ್ ಸುಮಾರು 54 ಸಾವಿರ ಪೆಟ್ರೋಲ್ ಬಂಕ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ತಮ್ಮ ಬಹುದಿನಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 13ರಂದು ದೇಶಾದ್ಯಂತ್ ಸುಮಾರು 54 ಸಾವಿರ ಪೆಟ್ರೋಲ್ ಬಂಕ್ ಗಳನ್ನು ಬಂದ್ ಪ್ರತಿಭಟನೆ ನಡೆಸುವುದಾಗಿ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪದಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ನೊಂದಿಗೆ ನಡೆದ ಮೊದಲ ಜಂಟಿ ಸಭೆಯಲ್ಲಿ ಅಕ್ಟೋಬರ್ 13ರಂದು ಸಂಪೂರ್ಣ ಬಂದ್ ಕರೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಪೆಟ್ರೋಲ್ ಡೀಲರ್ಸ್ ಸಂಘದ ಅಧ್ಯಕ್ಷ ಉದಯ್ ಲೋಧ್ ಅವರು ಹೇಳಿದ್ದಾರೆ.
ಮಾರುಕಟ್ಟೆ ಶಿಸ್ತು ಮಾರ್ಗಸೂಚಿ ಅಡಿ ಅನಗತ್ಯವಾಗಿ ದಂಡ ವಿಧಿಸುವುದನ್ನು ತೆಗೆದು ಹಾಕುವುದು ಸೇರಿದಂತೆ ಕಳೆದ ವರ್ಷ ನವೆಂಬರ್ 4ರಂದು ತೈಲ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಈ ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿ ಪೆಟ್ರೋಲ್ ಬಂಕ್ ಬಂದ್ ಕರೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತೈಲ ಬೆಲೆ ನಿತ್ಯ ಪರಿಷ್ಕರಿಸುವುದರಿಂದ ಡೀಲರ್ ಗಳಿಗೆ ಮತ್ತು ಗ್ರಾಹಕರಿಗೆ ಇಬ್ಬರಿಗೂ ನಷ್ಟವಾಗುತ್ತಿದೆ. ತೈಲ ಬೆಲೆ ನಿತ್ಯ ಪರಿಷ್ಕರಣೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com