ಅತೀವ್ರ ಚಳಿಯಿರುವ ಗಡಿ ಪ್ರದೇಶದಲ್ಲಿ 20 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಕಾಪಾಡುವ ಸಲುವಾಗಿ ಈಗಾಗಲೇ ಉತ್ತಮ ತಂತ್ರಜ್ಞಾನ ಬಳಕೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. 1962 ರೈಸ್ಡ್ ಪಡೆಗಳಿಗೆ ನೀಡಲಾಗುತ್ತಿರುವ ಮೂಲಭೂತ ಸೌಕರ್ಯಗಳ ಕುರಿತು ನಮಗೆ ತೃಪ್ತಿಯಿಲ್ಲ. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಈ ಬಗ್ಗೆ ಕಾರ್ಯಗಳನ್ನು ಮಾಡಲಾಗುತ್ತಿದೆ. 35 ಹಳೆಯ ಅತ್ಯಂತ ಎತ್ತರದ ಗಡಿ ಪ್ರದೇಶಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ.
ಐಟಿಬಿಪಿ ಗಡಿ ಪ್ರದೇಶಗಳಲ್ಲಿ ರಸ್ತೆಗಳು, ಮೊಬೈಲ್, ಸ್ಯಾಟಲೈಟ್ ಸಂಪರ್ಕಗಳನ್ನು ಒದಗಿಸುವ ಕುರಿತು ಕೆಲಸಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಗಡಿಯಲ್ಲಿ ಉತ್ತಮ ರೀತಿಯ ಬಾಂಧವ್ಯಗಳನ್ನು ಹೊಂದುವಂತೆ ಐಟಿಬಿಪಿ ಯೋಧರಿಗೆ ಕಿವಿ ಮಾತು ಹೇಳಿರುವ ಅವರು, ಗಡಿಯಲ್ಲಿ ಹುತಾತ್ಮರಾಗುವ ಒಬ್ಬ ಯೋಧನ ಕುಟುಂಬದ ಜವಾಬ್ದಾರಿಯನ್ನು ಐಟಿಬಿಟಿ ಅಧಿಕಾರಿಗಳು ತೆಗೆದುಕೊಳ್ಳಬೇಕು. ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಶೇ.50 ರಷ್ಟು ಅಂಗವೈಕಲ್ಯ ಸಮಸ್ಯೆಗಳಿಂದ ಬಳಲುತ್ತಿರುವ ಯೋಧರಿಗೆ ಸಹಾಯ ಮಾಡಲು ಸಚಿವಾಲಯದ ಈಗಾಗಲೇ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ಬಳಿಕ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಹಾಗೂ ವಿಚಾರಗಳ ಕುರಿತು ಕೇಂದ್ರ ಸರ್ಕಾರದ ವತಿಯಿಂದ ನೂತನವಾಗಿ ನೇಮಕಗೊಂಡಿರುವ ಸಂಧಾನಕಾರ ದಿನೇಶ್ವರ್ ಶರ್ಮಾ ಕುರಿತಂತೆ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರ ವಿಚಾರಗಳ ಕುರಿತಂತೆ ಭಾರತ ಸರ್ಕಾರದ ವತಿಯಿಂದ ದಿನೇಶ್ವರ್ ಶರ್ಮಾ ಅವರನ್ನು ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ. ಹೇಗೆ... ಹಾಗೂ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ದಿನೇಶ್ವರ್ ಶರ್ಮಾ ಅವರ ನೇಮಕಾತಿಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಸ್ವಾಗತಿಸಿದ್ದಾರೆ.