ನಿತಿನ್ ಗಡ್ಕರಿ ಅವರ ’ಉದ್ಯೋಗಗಳೆಲ್ಲಿವೆ? ಪ್ರಶ್ನೆ ಅದ್ಭುತವಾದದ್ದು: ರಾಹುಲ್ ಗಾಂಧಿ

ಉದ್ಯೋಗಾವಕಾಶಗಳೇ ಇಲ್ಲದಿರುವಾಗ ಮೀಸಲಾತಿ ನೀಡಿದರೂ, ಉದ್ಯೋಗ ಭದ್ರತೆಗಳು ಹೇಗೆ ಸಿಗುತ್ತವೆ ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅದ್ಭುತವಾದ ಪ್ರಶ್ನೆ ಎಂದು ಹೇಳಿದ್ದಾರೆ.
ನಿತಿನ್ ಗಡ್ಕರಿ ಅವರ ’ಉದ್ಯೋಗಗಳೆಲ್ಲಿವೆ? ಪ್ರಶ್ನೆ ಅದ್ಭುತವಾದದ್ದು: ರಾಹುಲ್ ಗಾಂಧಿ
ನಿತಿನ್ ಗಡ್ಕರಿ ಅವರ ’ಉದ್ಯೋಗಗಳೆಲ್ಲಿವೆ? ಪ್ರಶ್ನೆ ಅದ್ಭುತವಾದದ್ದು: ರಾಹುಲ್ ಗಾಂಧಿ
Updated on: 
ನವದೆಹಲಿ: ಉದ್ಯೋಗಾವಕಾಶಗಳೇ ಇಲ್ಲದಿರುವಾಗ ಮೀಸಲಾತಿ ನೀಡಿದರೂ, ಉದ್ಯೋಗ ಭದ್ರತೆಗಳು ಹೇಗೆ ಸಿಗುತ್ತವೆ ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಅದ್ಭುತವಾದ ಪ್ರಶ್ನೆ ಎಂದು ಹೇಳಿದ್ದಾರೆ. 
ಉದ್ಯೋಗವಾಕಾಶಗಳು ಎಲ್ಲಿವೆ ಎಂದು ಅದ್ಭುತವಾದ ಪ್ರಶ್ನೆ ಕೇಳಿದ್ದೀರಿ, ಇದೇ ಪ್ರಶ್ನೆಯನ್ನು ದೇಶಾದ್ಯಂತ ಜನತೆ ಕೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಗಡ್ಕರಿಗೆ ಟಾಂಗ್ ನೀಡಿದ್ದಾರೆ.  ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮರಾಠಾ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೀಸಲಾತಿ ನೀಡಿರುವ ಬಗ್ಗೆ ಊಹಿಸಿಕೊಳ್ಳೋಣ. ಆದರೆ, ಉದ್ಯೋಗಾವಕಾಶಗಳೇ ಇಲ್ಲ. ಬ್ಯಾಂಕಿಂಗ್ ವಲಯದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ಉದ್ಯೋಗಾವಕಾಶಗಳು ಕ್ಷೀಣಿಸಿವೆ. ಸರ್ಕಾರದ ನೇಮಕಾತಿ ಪ್ರಕ್ರಿಯೆಗಳೂ ಕೂಡ ಸ್ಥಗಿತಗೊಂಡಿವೆ. ಇನ್ನು ಉದ್ಯೋಗಗಳೆಲ್ಲಿವೆ? ಎಂದು ಪ್ರಶ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಡ್ಕರಿ ಅವರನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ ನಿಮ್ಮ ಪ್ರಶ್ನೆ ಅದ್ಭುತವಾದದ್ದು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com