ನವದೆಹಲಿ: ರಫೇಲ್ ಫೈಟರ್ ಜೆಟ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಬಂದಿದ್ದು ಇದೀಗ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಸಣ್ಣದೊಂದು ಟೀಸರ್ ವಿಡಿಯೋ ಬಿಡುಗಡೆ ಮಾಡಿದೆ.
ರಫೇಲ್ ಕುರಿತಂತೆ ಟೀಸರ್ ವಿಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್ ತಾನು ಸದ್ಯದಲ್ಲೇ ಮೋದಿ ಸರ್ಕಾರದ ಈ ಅವ್ಯವಹಾರದ ಮೇಲೆ ಇನ್ನಷ್ಟು ಬೆಳಕು ಚೆಲ್ಲುವುದಾಗಿ ಹೇಳಿಕೊಂಡಿದೆ. ಇನ್ನು ತನ್ನ ಫಾಲೋವರ್ ಗಳಿಗೆ ನೋಡುತ್ತಾ ಇರಿ ಈ ವಿಷಯದಲ್ಲಿ ಇನ್ನಷ್ಟು ವಿಷಯಗಳು ಹೊರ ಬರಲಿವೆ ಎಂದು ಹೇಳಿದೆ.
ಯುಪಿಎ ಸರ್ಕಾರ ನಿಗದಿ ಮಾಡಿದ್ದ ದರಕ್ಕಿಂತಲೂ ಹೆಚ್ಚು ಬೆಲೆ ತೆತ್ತು ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅದೇ ರಫೇಲ್ ಫೈಟರ್ ಜೆಟ್ ಗಳನ್ನು ಖರೀದಿಸುವ ಮೂಲಕ ಭ್ರಷ್ಟಾಚಾರ ಎಸಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
What 'really' is the Rafale deal? NOT for dummies. Here's the teaser, stay tuned for more later today... pic.twitter.com/5p2lj9xOhY