ದೇಶ

2019 ಲೋಕಸಭಾ ಚುನಾವಣೆ : ಬಿಜೆಪಿ, ಪ್ರತಿಪಕ್ಷಗಳ ಮೈತ್ರಿ ನಡುವಿನ ಹೋರಾಟ- ರಾಹುಲ್ ಗಾಂಧಿ

2019 ಲೋಕಸಭಾ ಚುನಾವಣೆ :  ಬಿಜೆಪಿ, ಪ್ರತಿಪಕ್ಷಗಳ ಮೈತ್ರಿ ನಡುವಿನ ಹೋರಾಟ- ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ಲಂಡನ್ : ಮೊದಲ ಬಾರಿಗೆ ಭಾರತೀಯ ಸಂಸ್ಥೆಗಳ ಮೇಲೆ "ವ್ಯವಸ್ಥಿತ ದಾಳಿ" ನಡೆದಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆ  ಬಿಜೆಪಿ ಹಾಗೂ ಪ್ರತಿಪಕ್ಷಗಳ ಮೈತ್ರಿ ನಡುವಿನ ಹೋರಾಟ ಆಗಿರಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ  ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಹಾಗೂ ಅಲುಮ್ನಿ ಯೂನಿಯನ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ಸೋಲಿಸುವುದು ಹಾಗೂ   ಭಾರತೀಯ ಸಂಸ್ಥೆಗಳ ಮೇಲಿನ ದಾಳಿ ನಿಲ್ಲಿಸುವುದು  ಕಾಂಗ್ರೆಸ್ ಪಕ್ಷದ ಪ್ರಥಮ ಆದ್ಯತೆಯಾಗಿದೆ ಎಂದರು.

ಎಲ್ಲಾ ಪ್ರತಿಪಕ್ಷಗಳು ದೇಶದ ಸ್ವರೂಪವನ್ನು ರಕ್ಷಿಸಲು ಬದ್ಧವಾಗಿದ್ದು,  ಭಾರತೀಯ ಸಂವಿಧಾನ ಮತ್ತು ಸಂಸ್ಥೆಗಳ ಮೇಲಿನ ದಾಳಿಯನ್ನು ನಿಲ್ಲಿಸಿ ಸಂರಕ್ಷಿಸಲಾಗುವುದು ಹೀಗಾಗಿ ಬಿಜೆಪಿ ಸೋಲಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

 ಹಿಂಸೆಯನ್ನು ಖಂಡಿಸುವುದು ನಮ್ಮ ನೀತಿಯಾಗಿದೆ. ಹಿಂಸೆಯನ್ನು ಹತ್ತಿರದಿಂದ ನೋಡಿದ್ದೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇನೆ. ಹಿಂಸಾಚಾರ ಹೇಗೆ ವಿನಾಶಕಾರಿ ಎಂಬುದನ್ನು ಅರಿತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.

 ಚೀನಾ ರಾಷ್ಟ್ರದಲ್ಲಿ ದಿನಕ್ಕೆ 50 ಸಾವಿರ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ. ಆದರೆ ಭಾರತದಲ್ಲೇ ಕೇವಲ 450 ಉದ್ಯೋಗ ಸೃಷ್ಟಿಸಲಾಗುತ್ತಿದೆ. ಸಮಸ್ಯೆಗಳನ್ನು  ಮೊದಲು ಅರ್ಥಮಾಡಿಕೊಂಡರೆ ಉದ್ಯೋಗ ಸೃಷ್ಟಿಸಬಹುದು ಆದರೆ,ನಾವು ಅಗತ್ಯವಾದಷ್ಟು ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.