ಪಾಟ್ನಾ: ರಾಜಸ್ಥಾನವು ಬಿಜೆಪಿಗೆ ಮೊದಲ ತ್ರಿವಳಿ ತಲಾಕ್ ನೀಡಿದೆ.ಎಂದು ಬಿಜೆಪಿ ಹಿರಿಯ ನಾಯಕ, ನಟ ಶತ್ರುಘ್ನ ಸಿನ್ಹಾ ಲೇವಡಿ ಮಾಡಿದ್ದಾರೆ.
ಇತ್ತೀಚೆಗೆ ರಾಜಸ್ಥಾನದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ತನ್ನದಾಗಿಸಿಕೊಂಡಿತ್ತು. ಬಿಜೆಪಿಯಲ್ಲಿ ಕೆಲ ಕಾಲದಿಂದ ಮೂಲೆಗುಂಪಾಗಿರುವ ನಾಯಕ ಶ್ತ್ರುಘ್ನ ಸಿನ್ಹಾ ತಮ್ಮ ಪಕ್ಷದ ಸಾಧನೆ ಬಗೆಗೆ ಲೇವಡಿ ಮಾಡುವ ಮೂಲಕ ತಮ್ಮಲ್ಲಿನ ಅಸಮಾಧಾನವನ್ನು ಹೊರಹಾಕಿದ್ದಾರೆ.
Breaking news with record breaking disastrous results for ruling party - Rajasthan becomes first state to give BJP Triple Talaq. Ajmer: Talaq,Alwar : Talaq ,Mandalgarh: Talaq. Our opponents winning the elections with record margins, giving our party a jolt. 1>2
"ಅಜ್‌ಮೇರ್ : ತಲಾಕ್; ಅಲ್ವಾರ್: ತಲಾಕ್, ಮಂಡಲಗಢ: ತಲಾಕ್. ಬಿಜೆಪಿಯನ್ನು ಮಣಿಸಿ ತಮ್ಮ ವಿರೋಧಿಗಳು ದೊಡ್ಡ ಅಂತರದಲ್ಲಿ ಚುನಾವಣೆಯನ್ನು ಗೆದ್ದಿರುವುದು ಪಕ್ಷಕ್ಕೆ ದೊಡ್ಡ ಪ್ರಹಾರ" ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.
Better late than never, otherwise the disastrous results could or would be soon reformed as Tata-Bye-Bye results. Wake up BJP. Jai Hind.@>2,
ಇಷ್ಟೇ ಅಲ್ಲದೆ ಸಿನ್ಹಾ "ಕಾಲವಿನ್ನೂ ಮಿಂಚಿಲ್ಲ ಕೂಡಲೇ ತಿದ್ದಿಕೊಳ್ಳಿ ಇಲ್ಲವಾದಲ್ಲಿ ಪಕ್ಷದ ವಿರುದ್ಧ ಟಾಟಾ-ಬೈಬೈ ಫಲಿತಾಂಶ ಬರುವುದು ಖಚಿತ" ಎಂದಿದ್ದಾರೆ. ಬಿಹಾರದ ಪಟ್ನಾ ಸಾಹೇಬ್ ಕ್ಷೇತ್ರದ ಸಂಸದರಾಗಿರುವ ಶತ್ರುಘ್ನ ಸಿನ್ಹಾ ಈ ಟ್ವಿಟ್ಟರ್ ನಿಂದ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.