ಸಾರ್ವಜನಿಕ ಆಸ್ತಿಗೆ ಹಾನಿ ಪ್ರಕರಣ, ಎಎಪಿ ಶಾಸಕ ಸುರೇಂದರ್ ಸಿಂಗ್ ವಜಾ

ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಎಎಪಿ ಶಾಸಕ ಸುರೇಂದರ್ ಸಿಂಗ್ ಗೆ ದೆಹಲಿ ನ್ಯಾಯಾಲಯ ಬಿಡುಗಡೆ ನೀಡಿದೆ.
ಸುರೇಂದರ್ ಸಿಂಗ್
ಸುರೇಂದರ್ ಸಿಂಗ್
Updated on: 
ನವದೆಹಲಿ: ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಎಎಪಿ ಶಾಸಕ ಸುರೇಂದರ್ ಸಿಂಗ್ ಗೆ ದೆಹಲಿ ನ್ಯಾಯಾಲಯ ಬಿಡುಗಡೆ ನೀಡಿದೆ.  2014ರಲ್ಲಿ ದಾಖಲಾಗಿದ್ದ ಪ್ರಕರಣದ ತೀರ್ಪು ಇದೀಗ ಹೊರಬಂದಿದ್ದು ದೆಹಲಿ ನ್ಯಾಯಾಲಯವು ಶಾಸಕರನ್ನು ಆರೋಪಮುಕ್ತಗೊಳಿಸಿದೆ. 
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮಾರ್ ವಿಶಾಲ್ ದೆಹಲಿ ಪೋಲೀಸರು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಹಲವಾರು ದೊಷಗಳಿದೆ ಎಂದಿದ್ದು ಶಾಸಕರ ವಿರುದ್ಧ ಆರೋಪಕ್ಕೆ ಯಾವ ಸಾಕ್ಷಿಗಳಿಲ್ಲ ಎಂದು ಹೇಳಿದ್ದು ಶಸಕ ಸುರೇಂದರ್ ಸಿಂಗ್ ಅವರನ್ನು ಪ್ರಕರಣದಿಂದ ವಜಾಗೊಳಿಸಿದರು.  ವಿಚಾರಣೆಗೆ ಪದೇ ಪದೇ ಗೈರುಹಾಜರಾಗಿದ್ದ ಸುರೇಂದರ್ ಸಿಂಗ್ ಅವರನ್ನು ಕಳೆದ ವರ್ಷ ಆಗಸ್ಟ್ 5ರಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. 
ಪಶ್ಚಿಮ ದೆಹಲಿಯ ನಾರೈನ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಪೋಸ್ಟರು ಮತ್ತು ಹಾರ್ಡಿಂಗ್ಸ್ ಹಾಕುವ ಮೂಲಕ ಹಾನಿಗೊಳಿಸಿದ್ದಾರೆ ಎಂದು ಎಎಪಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com