ಮುಂಬೈ ಪೌರಾಡಳಿತ ಸಂಪೂರ್ಣ ಕುಸಿದಿದೆ: ರಾಹುಲ್ ಗಾಂಧಿ

Published On :
ಮುಂಬೈ: ರಸ್ತೆಗಳು ನದಿಯಂತಾಗಿದ್ದು, ರೈಲು ಹಳಿಗಳ ಮೇಲೆ ಮೇಲ್ಸೇತುವೆ ಕುಸಿದು ಬಿಳುತ್ತಿರುವುದನ್ನು ಗಮನಸಿದರೆ ಮುಂಬೈ ಪೌರಾಡಳಿತ ಸಂಪೂರ್ಣ ಕುಸಿದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಆರೋಪಿಸಿದ್ದಾರೆ.
ವರುಣನ ಆರ್ಭಟಕ್ಕೆ ವಾಣಿಜ್ಯ ನಗರಿ ತತ್ತರಿಸಿ ಹೋಗಿದ್ದು, ಧಾರಾಕಾರ ಮಳೆಗೆ ಅಂಧೇರಿ ಪಶ್ಚಿಮ ಭಾಗದಿಂದ ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ರೈಲು ಹಳಿಯ ಮೇಲೆ ಕುಸಿದು ಬಿದ್ದಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ರಸ್ತೆಗಳು ನದಿಯಂತಾಗಿದ್ದು, ಅದರಲ್ಲಿ ಜನ ಸಿಲುಕಿಕೊಂಡಿದ್ದಾರೆ. ಮೇಲ್ಸೇತುವೆಗಳು ಕುಸಿದು ಬೀಳುತ್ತಿವೆ. ಇದರೊಂದಿಗೆ ಪೌರಾಡಳಿತವೂ ಕುಸಿದು ಬಿದ್ದಿದೆ. ನಾನು ಮುಂಬೈ ಜನತೆಯೊಂದಿಗೆ ಇದ್ದೇನೆ. ಸುರಕ್ಷಿತವಾಗಿರಿ ಎಂದು ಕರೆ ನೀಡಿದ್ದಾರೆ.
ಮೇಲ್ಸೇತುವೆ ಕುಸಿತ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ತನಿಖೆಗೆ ರೈಲ್ವೆ ಸಚಿವ ಪಿಯೂಸ್ ಗೋಯಲ್ ಅವರು ಆದೇಶಿಸಿದ್ದು, ಕೂಡಲೇ ದುರಸ್ಥಿ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


