ಜೈಪುರ: ಸುಮಾರು 40 ವರ್ಷಗಳ ನಂತರ ರಾಜಸ್ತಾನದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ ತಮ್ಮ ಪುತ್ರಿಯರ ಒತ್ತಾಯದ ಮೇರೆಗೆ ತಮ್ಮ ಶಿಕ್ಷಣ ಮುಂದುವರಿಸಿದ್ದಾರೆ,
ಮೀನಾ ಓದಿರುವುದು ಕೇವಲ 7ನೇ ತರಗತಿ, ಸೇನಯಲ್ಲಿದ್ದ ತಂದೆ ತೀರಿಕೊಂಡ ನಂತರ ಕುಟುಂಬ ನಿರ್ವಹಣೆಗಾಗಿ ಕೃಷಿ ಆರಂಭಿಸಿದರು.
ರಾಜಕೀಯ ಪ್ರವೇಶಿಸಿದ ಮೇಲೆ ತನ್ನ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮುಂದುವರಿಸುವಂತೆ ಮನವಿ ಮಾಡಿದರು. ಹಾಗಾಗಿ ಮುಂದುವರಿಸುತ್ತಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನನ್ನ ತಂದೆ ಬಹಳ ಉತ್ತಮ ಕೆಲಸ ಮಾಡುತ್ತಿದ್ದಾರೆ, ಅವರು 10 ಮತ್ತು 12ನೇ ತರಗತಿ ಪರೀಕ್ಷೆ ಬರೆದಿದ್ದಾರೆ, ಈಗ ಪದವಿ ಪರೀಕ್ಷೆ ಬರೆಯುತ್ತಿದ್ದಾರೆ, ಅವರ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ಎಂದು ಮೀನಾ ಪುತ್ರಿ ದೀಪಿಕಾ ಹೇಳಿದ್ದಾರೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವಾಗ ನಾನು ಅವರಿಗೆ ತರಬೇತಿ ನೀಡುತ್ತೇನೆ, ಜೊತೆಗೆ ಪಠ್ಯ ಸಂಬಂಧಿತ ಮಾಹಿತಿಯನ್ನು ವಾಟ್ಸಾಪ್ ಮಾಡುತ್ತೇನೆ ಎಂದು ಹೇಳಿದ್ದಾರೆ.
40 ವರ್ಷದ ನಂತರ ಮತ್ತೆ ಕಲಿಯಲು ಆರಂಭಿಸಿರುವ ಶಾಸಕ ಮೀನಾ ಅವರಿಗೆ ಸ್ನಾತಕೋತ್ತರ ಪದವಿ ಕೊಡಿಸುವ ಯೋಜನೆ ಅವರ ಮಕ್ಕಳಿಗಿದೆ.