ಕೇರಳ ಚರ್ಚ್ ಅತ್ಯಾಚಾರ ಪ್ರಕರಣ: ಬಂಧಿತ ಇಬ್ಬರು ಪಾದ್ರಿಗಳ ಜಾಮೀನು ಅರ್ಜಿ ವಜಾ

Published On :
ತಿರುವಳ್ಳ(ಕೇರಳ): ಅತ್ಯಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಮಲಂಕರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ನ ಇಬ್ಬರು ಪಾದ್ರಿಗಳ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಮಲಂಕರ ಚರ್ಚ್ ನ ಲೈಂಗಿಕ ಹಗರಣದ ನಾಲ್ವರು ಆರೋಪಿಗಳ ಪೈಕಿ ಕಳೆದ ವಾರ ಬಂಧನಕ್ಕೊಳಗಾಗಿದ್ದ ಇಬ್ಬರು ಆರೋಪಿಗಳಾದ ಪಾದ್ರಿ ಜಾನ್ಸನ್ ವಿ. ಮ್ಯಾಥೀವ್ ಹಾಗೂ ಫಾದರ್ ಜಾಬ್ ಮ್ಯಾಥ್ಯೂ ಅವರು ಜಾಮೀನು ಕೋರಿ ತಿರುವಳ್ಳ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಕ್ರೈಸ್ತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪ ಇವರ ಮೇಲಿದೆ.
ಪ್ರಕರಣದ ಇತರೆ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬುಧವಾರ ನ್ಯಾಯಾಲಯ ತಿರಸ್ಕರಿಸಿದೆ.
ಘಟನೆ ಸಂಬಂಧ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಬೇಕಾಗಿದ್ದು ಫಾದರ್ ಅಬ್ರಹಾಂ ವರ್ಗೀಸ್ ಅಲಿಯಾಸ್ ಸೋನಿ ಹಾಗೂ ಫಾದರ್ ಜಾರ್ಜ್ ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಎರಡನೇ ಆರೋಪಿಯಾಗಿರುವ ಪಾದ್ರಿ ಜಾಬ್ ಮ್ಯಾಥೀವ್ ಕೊಲ್ಲಂ ಪೊಲೀಸರರೆದುರು ಶರಣಾಗಿದ್ದರು.
ಪ್ರಕರಣದಲ್ಲಿ ಮೂವರು ಪಾದ್ರಿಗಳ ವಿರುದ್ಧ ಸೆಕ್ಷನ್ 376 ಅತ್ಯಾಚಾರ ಕೇಸ್ ಹಾಕಲಾಗಿದ್ದು, ಜಾನ್ಸನ್ ವಿರುದ್ಧ ಮಾತ್ರ ಕೇವಲ ಸೆಕ್ಷನ್ 354 ಅಡಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bail pleaಜಾಮೀನು ಅರ್ಜಿKerala church sex scandalMalankara priestsಕೇರಳ ಚರ್ಚ್ ಅತ್ಯಾಚಾರ ಪ್ರಕರಣಮಲಂಕಾರ ಪಾದ್ರಿಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


