ಉತ್ತರಪ್ರದೇಶದ ರೆಸ್ಟೋರೆಂಟ್ನಲ್ಲಿ ವೀರಪ್ಪನ್, ಉಗ್ರ ಕಸಬ್, ಬಾಬಾ ರಾಮ್‌ರಹೀಂ ಫೋಟೋಗಳು!

ಉತ್ತರಪ್ರದೇಶ ಪೊಲೀಸರು ರೆಸ್ಟೋರೆಂಟ್ ವೊಂದರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಗೋಡೆಗಳ ಮೇಲೆ ಉಗ್ರರು, ಡಾನ್ ಗಳು, ಅಪರಾಧಿಗಳ...
ರೆಸ್ಟೋರೆಂಟ್
ರೆಸ್ಟೋರೆಂಟ್
ಕಾನ್ಪುರ್: ಉತ್ತರಪ್ರದೇಶ ಪೊಲೀಸರು ರೆಸ್ಟೋರೆಂಟ್ ವೊಂದರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಗೋಡೆಗಳ ಮೇಲೆ ಉಗ್ರರು, ಡಾನ್ ಗಳು, ಅಪರಾಧಿಗಳ ಫೋಟೋಗಳನ್ನು ಹಾಕಿದ್ದು ಇದನ್ನು ಕಂಡ ಪೊಲೀಸರು ಬೆಚ್ಚಿಬಿದ್ದಿದ್ದಾರೆ. 
ಕಾನ್ಪುರದ ಬರ್ರಾಕ್ ಟೀ ಪಾರ್ಟ್ ನರ್ ರೆಸ್ಟೊರೆಂಟ್ ಮೇಲೆ ಸಿಟಿ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದರು. ರೆಸ್ಟೋರೆಂಟ್ ನಲ್ಲಿ ಕಾಡುಗಳ್ಳ ವೀರಪ್ಪನ್, ಭಯೋತ್ಪಾದಕ ಕಸಬ್, ಡಾನ್ ಅಬು ಸಲೇಂ, ಸ್ವಯಂಘೋಷಿತ ದೇವಮಾನವ ಬಾಬಾ ರಾಮ್‌ರಹೀಂ ಫೋಟೋಗಳನ್ನು ಹಾಕಲಾಗಿತ್ತು. 
ರೆಸ್ಟೋರೆಂಟ್ ನಲ್ಲಿ ಕೈಕೋಳ ಹಾಗೂ ನೇಣು ಹಗ್ಗವೂ ಸಹ ಇದ್ದು ಅವುಗಳೊಂದಿಗೆ ಗ್ರಾಹಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಮಜಾ ಮಾಡುತ್ತಿದ್ದರು. ಅಲ್ಲಿನ  ವೇಟರ್ ಗಳು ಖಾಕಿ ಡ್ರೆಸ್ ಧರಿಸುತ್ತಿದ್ದರು. 
ಸಿಟಿ ಮ್ಯಾಜಿಸ್ಟ್ರೇಟ್ ರೆಸ್ಟೋರೆಂಟ್ ಮೇಲೆ ಕ್ರಮಕ್ಕೆ ಮುಂದಾಗಿದ್ದು ನೋಟೀಸ್ ನೀಡಿದೆ. ರೆಸ್ಟೋರೆಂಟ್ ಹೆಸರು ಬರ್ರಾಕ್ ಟೀ ಪಾರ್ಟ್ನರ್ ಬದಲಿಸುವಂತೆ ಸೂಟಿಸಿದ್ದು ಗೋಡೆ ಮೇಲಿನರುವ ಎಲ್ಲಾ ಫೋಟೋಗಳನ್ನು ತೆರವುಗೊಳಿಸುವಂತೆ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com