ಟ್ವಿಟರ್ ನಲ್ಲಿ ಕ್ಷಮೆ ಕೇಳಿರುವ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿ ಜನಕ್ ಪುರದಲ್ಲಿ ಮಾತನಾಡಿದ್ದು ನೇಪಾಳದ ಜನತೆಯನ್ನುದ್ದೇಶಿಸಿಯೇ ಹೊರತು ಭಾರತೀಯರನ್ನುದ್ದೇಶಿಸಿ ಅಲ್ಲ. ಆದರೆ ಭಾರತೀಯರನ್ನುದ್ದೇಶಿಸಿ ಮೋದಿ ಭಾಷಣ ಮಾಡಿದ್ದರು ಎಂದು ಸುಷ್ಮಾ ಸ್ವರಾಜ್ ವಿಡಿಯೋ ಸಹಿತ ಟ್ವೀಟ್ ಮಾಡಿದ್ದರು. ಇದನ್ನು ನೇಪಾಳದ ಸಂಸತ್ ಸದಸ್ಯರೂ ಗಮನಿಸಿದ್ದರು. ನಂತರ ಅದು ಸುಳ್ಳು ಎಂದು ತಿಳಿದುಬಂದಿದ್ದು, ಸುಷ್ಮಾ ಸ್ವರಾಜ್ ಕ್ಷಮೆ ಕೇಳಿದ್ದಾರೆ.