ಈ ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾಗಿರುವ ಭಾರತ, ಅವುಗಳನ್ನು 2020-2024ರೊಳಗಾಗಿ ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಲಿದೆ ಎನ್ನಲಾಗಿದೆ. ಈಗಾಗಲೇ ಸಾಗರದಲ್ಲಿ ಚೀನಾದ ಜಲಾಂತರ್ಗಾಮಿ ನೌಕೆಗಳು ನಿರಂತರ ಕಣ್ಗಾವಲು ಇರಿಸಿದ್ದು, ದೇಶದ ಜಲಪರಿಧಿಯನ್ನೂ ಪ್ರವೇಶಿಸಲು ಯತ್ನಿಸುತ್ತವೆ. ಹೀಗಾಗಿ ಚೀನಾದ ಹಾರಾಟಕ್ಕೆ ಮಿತಿ ಹಾಕಲು ಮತ್ತು ದೇಶದ ಸಾಗರ ರಕ್ಷಣೆ, ನೌಕಾಪಡೆಯ ಬಲವರ್ಧನೆಗೆ ಎಂಎಚ್-60 ಬಹುಪಯೋಗಿ ಹೆಲಿಕಾಪ್ಟರ್ ನ ಅವಶ್ಯಕತೆಯಿದ್ದು, ಅಮೆರಿಕದೊಂದಿಗೆ ಸರ್ಕಾರ ಶೀಘ್ರ ಒಪ್ಪಂದ ಅಂತಿಮಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.