ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮೇಲೆ ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದ ನಂತರ, ದೇವಸ್ಥಾನ ಪ್ರವೇಶಿಸಲು ಯತ್ನಿಸುತ್ತಿರುವ ಐದನೇ ಮಹಿಳೆ ಮಂಜು ಆಗಿದ್ದಾರೆ. ಈ ಮುಂಚೆ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆ ಸುಹಾಸಿನಿ ರಾಜ್, ಮೋಜೋ ಟಿವಿಯ ಕೋಕಿಲಾ ಜಾಕಲ್, ಸಾಮಾಜಿಕ ಕಾರ್ಯಕರ್ತೆಯರಾದ ರೆಹನಾ ಫಾತಿಮಾ ಹಾಗೂ ಮೇರಿ ಸ್ವೀಟಿ ಅವರು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದರು.