ತಿರುಗಿ ಬಿದ್ದರೆ ಸಾವನ್ನೆ ಗೆಲ್ಲಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ತಿನ್ನಲು ಬಂದ ಚಿರತೆಯನ್ನು ಬೆದರಿಸಿ ಓಡಿಸಿ ನಾಯಿಯೊಂದು ತನ್ನ ಜೀವವನ್ನು ಉಳಿಸಿಕೊಂಡಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ತಾನದ ಜೈಪುರದಲ್ಲಿರುವ ಝಾಲಾನಾ ಚಿರತೆ ಸಫಾರಿ ಪಾರ್ಕ್ ನಲ್ಲಿ ರಸ್ತೆ ಮಧ್ಯೆ ಮಲಗಿ ವಿರಮಿಸುತ್ತಿದ್ದ ನಾಯಿಯನ್ನು ಹೊಂಚು ಹಾಕಿ ಚಿರತೆಯೊಂದು ತಿನ್ನಲು ಮುಂದಾದಾಗ ಕೂಡಲೇ ಎಚ್ಚೇತ ನಾಯಿ ಜೋರಾಗಿ ಬೊಗಳಲು ಶುರು ಮಾಡಿತು.
ನಾಯಿಯ ಬೊಗಳಿಕೆಗೆ ಬೆದರಿದ ಚಿರತೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಅಲ್ಲಿಂದ ಕಾಲು ಕಿತ್ತಿದೆ. ಈ ದೃಶ್ಯವನ್ನು ಪ್ರವಾಸಿಗರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.