ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಹಾರ: ಪ್ರಸಾದ ಸೇವಿಸಿ 100 ಮಕ್ಕಳು ಅಸ್ವಸ್ಥ

ವಿಶ್ವಕರ್ಮ ಪೂಜೆ ಹಿನ್ನಲೆಯಲ್ಲಿ ಬಿಹಾರ ರಾಜ್ಯದ ಬೇಗುಸರಾಯ್ ಜಿಲ್ಲೆಯ ಪಥೈ ಎಂಬ ಗ್ರಾಮದಲ್ಲಿ ನೀಡಲಾಗಿದ್ದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು...
ಬೇಗುಸರಾಯ್: ವಿಶ್ವಕರ್ಮ ಪೂಜೆ ಹಿನ್ನಲೆಯಲ್ಲಿ ಬಿಹಾರ ರಾಜ್ಯದ ಬೇಗುಸರಾಯ್ ಜಿಲ್ಲೆಯ ಪಥೈ ಎಂಬ ಗ್ರಾಮದಲ್ಲಿ  ನೀಡಲಾಗಿದ್ದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ನಿನ್ನೆ ಸಂಜೆ ಮಕ್ಕಳಿಗೆ ಪ್ರಸಾದ ವಿತರಿಸಲಾಗಿದ್ದು, ಪ್ರಸಾದ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಕೆಲ ಮಕ್ಕಳು ಪ್ರಜ್ಞೆ ಕಳೆದುಕೊಂಡಿದ್ದಾರೆ. 
ಕೂಡಲೇ ಮಕ್ಕಳನ್ನು ಖೊದನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಬಳಿಕ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com