ದೇಶ

ಸಿಬಿಎಸ್ಇ ಟಾಪರ್ ಗ್ಯಾಂಗ್ ರೇಪ್: ಪ್ರಧಾನಿ ಮೌನವನ್ನು ಒಪ್ಪಿಕೊಳ್ಳಲಾಗುವುದಿಲ್ಲ-ರಾಹುಲ್ ಗಾಂಧಿ

ಸಿಬಿಎಸ್ಇ ಟಾಪರ್ ಗ್ಯಾಂಗ್ ರೇಪ್: ಪ್ರಧಾನಿ ಮೌನವನ್ನು ಒಪ್ಪಿಕೊಳ್ಳಲಾಗುವುದಿಲ್ಲ-ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :
\ನವದೆಹಲಿ: ಹರಿಯಾಣದ ಮಹೇಂದ್ರಗಢ ಜಿಲ್ಲೆ ರೇವಾರಿಯ  ಸಿಬಿಎಸ್‌ಇ ಟಾಪರ್‌ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಕುರಿತಂತೆ  ಪ್ರಧಾನಿ ನರೇಂದ್ರ ಮೋದಿಅವರ "ಮೌನ ಸ್ವೀಕಾರಾರ್ಹವಲ್ಲ"  ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಘಟನೆ ನಡೆದು ಆರು ದಿನಗಳ ಬಳಿಕ ರಾಹುಲ್ ಪ್ರಕರಣದ ಕುರಿತಂತೆ ಮೋದಿಯವರ ಪ್ರತಿಕ್ರಿಯೆಗೆ ಒತ್ತಾಯಿಸಿದ್ದಾರೆ."ಭಾರತ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ, ಇನ್ನೋರ್ವ ಮಗಳು ಗ್ಯಾಂಗ್ ರೇಪ್ ಗೆ ಬಲಿಯಾಗಿದ್ದಾಳೆ" ರಾಹುಲ್ ಟ್ವೀಟ್ ನಲ್ಲಿ ಹೇಳಿದ್ದಾರೆ.
"ಪ್ರಧಾನಿಯವರೆ, ನಿಮ್ಮ ಮೌನ ಸ್ವೀಕಾರಾರ್ಹವಲ್ಲ. ಭಾರತದ ಮಹಿಳೆಯರನ್ನು ಅಸುರಕ್ಷಿತ ಮತ್ತು ಭಯದಲ್ಲಿಡುವ, ಅತ್ಯಾಚಾರಿಗಳಿಗೆ ಮುಕ್ತವಾಗಿ ಹೊರಗೆ ನಡೆದಾಡಲು ಅವಕಾಶ ನಿಡುವ ಸರ್ಕಾರಕ್ಕೆ ನಾಚಿಕೆಯಾಗಬೇಕು"ಅವರು ಹೇಳಿದರು.
ರೇವಾರಿಯ  ಅತ್ಯಾಚಾರ ಪ್ರಕರಣದಲ್ಲಿ ಇದಾಗಲೇ ಮೂವರನ್ನುಬಂಧಿಸಿದ್ದು ಹರಿಯಾಣ ನ್ಯಾಯಾಲಯ ೫ ದಿನಗಳ ಪೊಲೀಸ್ ಕಸ್ಟಡಿಗೆ ಒಳಪಡಿಸಿದೆ.
ಮುಖ್ಯ ಆರೋಪಿ ನಿಶು, ದೀನ್ ದಯಾಳ್ ಹಾಗೂ ಸಂಜೀವ್ ಕುಮಾರ್ ಅವರುಗಳಾಗಿದ್ದು ಇವರೆಲ್ಲರೂ ಸೋಮವಾರ ಕಾನಿನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಿದ್ದರು. ಇವರನ್ನು ಮತ್ತೆ ಸೆಪ್ಟೆಂಬರ್ 21  ನ್ಯಾಯಾಲಯದ ಮುಂದೆ ಹಾಜರುಪಡಿಸಲು ನಿರ್ಧರಿಸಲಾಗಿದೆ.\

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.