ನಾನೂ ಶಿವನ ಭಕ್ತ, ಲಿಂಗ ಪೂಜೆ ಮಾಡಿದ ರಾಜಸ್ತಾನದ ಮುಸ್ಲಿಂ ಸಚಿವ!

ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ತೀವ್ರ ವಿರೋಧವಿದೆ. ಆದರೆ ರಾಜಸ್ತಾನದ ಮುಸ್ಲಿಂ ಸಚಿವರೊಬ್ಬರು ಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದು ತಮಗೆ ಯಾವುದೇ ಕಟ್ಟುಪಾಡುಗಳಿಲ್ಲ ಎಂಬುದನ್ನು ತೋರಿಸಿದ್ದಾರೆ.
ಸಹೇಲ್ ಮೊಹಮ್ಮದ್
ಸಹೇಲ್ ಮೊಹಮ್ಮದ್
Updated on
ಜೈಸಲ್ಮೇರ್(ರಾಜಸ್ಥಾನ): ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ತೀವ್ರ ವಿರೋಧವಿದೆ. ಆದರೆ ರಾಜಸ್ತಾನದ ಮುಸ್ಲಿಂ ಸಚಿವರೊಬ್ಬರು ಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದು ತಮಗೆ ಯಾವುದೇ ಕಟ್ಟುಪಾಡುಗಳಿಲ್ಲ ಎಂಬುದನ್ನು ತೋರಿಸಿದ್ದಾರೆ.
ಹೌದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಸಲೇಹ್ ಮೊಹಮ್ಮದ್ ಭಾನುವಾರ ಜೈಸಲ್ಮೇರ್ ಜಿಲ್ಲೆಯ ಪೊಕ್ರಾನ್ ನಲ್ಲಿರುವ ಶಿವ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
ಸಲೇಹ್ ಮೊಹಮ್ಮದ್ ಮುಸ್ಲಿಂ ಧಾರ್ಮಿಕ ಮುಖಂಡ ಘಾಜಿ ಫಕ್ರಿ ಅವರ ಮಗ. ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಶಿವ ದೇವಸ್ಥಾನಕ್ಕೆ ತೆರಳಿ ಹಿಂದೂ ಸಂಪ್ರದಾಯದಂತೆ ಶಿವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 
ಇನ್ನು ಮೊಹಮ್ಮದ್ ಅವರು ಸುಮಾರು ಅರ್ಧ ಗಂಟೆಗಳ ಕಾಲ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದು ಶಿವ ಲಿಂಗಕ್ಕೆ ಜೇನು ಮತ್ತು ಹಾಲನ್ನು ಅರ್ಪಿಸಿ ಪೂಜೆ ನೆರವೇರಿಸಿದರು ಎಂದು ದೇವಸ್ಥಾನದ ಅರ್ಚಕರಾದ ಮಧು ಚಂಗನಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com