ರೈತರ ಬಂಧು: 2,100 ಬಿಹಾರ ರೈತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್!

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸುಮಾರು 2,100 ಬಡ ರೈತರ ಸಾಲ ತೀರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
Updated on: 
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸುಮಾರು 2,100 ಬಡ ರೈತರ ಸಾಲ ತೀರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಿಹಾರ ರಾಜ್ಯದ 2100 ರೈತರ ಸಾಲವನ್ನು ಪಾವತಿಸಲಾಗಿದೆ ಎಂದು ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
''ರೈತರಿಗೆ ನೀಡಿದ ಭರವಸೆಯನ್ನು ಈಡೇರಿಸಲಾಗಿದೆ. ಸಾಲ ಹೊಂದಿದ 2100 ರೈತರ ಸಾಲವನ್ನು ಮರು ಪಾವತಿಸಲಾಗಿದೆ. ಇನ್ನು ಕೆಲವರಿಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್ ಅವರ ಮೂಲಕ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಮಿತಾಬ್ ರೈತರಿಗೆ ಸಹಾಯ ಹಸ್ತ ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವು ಅವರು ಉತ್ತರ ಪ್ರದೇಶದ ಸಾವಿರಾರು ರೈತರ ಸಾಲ ಪಾವತಿಸಿ ಗಮನ ಸೆಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com