ಮತದಾನದ ಮುನ್ನಾದಿನ ಬಂಗಾಳದಲ್ಲಿ ರಕ್ತದೋಕುಳಿ: ಓರ್ವ ಬಿಜೆಪಿ ಕಾರ್ಯಕರ್ತನ ಹತ್ಯೆ, ಇನ್ನಿಬ್ಬರಿಗೆ ಗುಂಡೇಟು

ಲೋಕಸಭೆ ಚುನಾವಣೆ ಆರನೇ ಹಂತದ ಮತದಾನ ಭಾನುವಾರ ನಡೆಯುತ್ತಿದ್ದು ಈ ನಡುವೆ ಪಶ್ಚಿಮ ಬಂಗಾಳದ ಝರಾಗ್ರಾಮ್ ದಲ್ಲಿ ಶನಿವಾರ ರಾತ್ರಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಹತ್ಯೆಗೈಯ್ಯಲಾಗಿದೆ.
ಮತದಾನದ ಮುನ್ನಾದಿನ ಬಂಗಾಳದಲ್ಲಿ ರಕ್ತದೋಕುಳಿ: ಓರ್ವ ಬಿಜೆಪಿ ಕಾರ್ಯಕರ್ತನ ಹತ್ಯೆ
ಮತದಾನದ ಮುನ್ನಾದಿನ ಬಂಗಾಳದಲ್ಲಿ ರಕ್ತದೋಕುಳಿ: ಓರ್ವ ಬಿಜೆಪಿ ಕಾರ್ಯಕರ್ತನ ಹತ್ಯೆ
Updated on: 
ಕೋಲ್ಕತ್ತಾ: ಲೋಕಸಭೆ ಚುನಾವಣೆ ಆರನೇ ಹಂತದ ಮತದಾನ ಭಾನುವಾರ ನಡೆಯುತ್ತಿದ್ದು ಈ ನಡುವೆ ಪಶ್ಚಿಮ ಬಂಗಾಳದ ಝರಾಗ್ರಾಮ್ ದಲ್ಲಿ ಶನಿವಾರ ರಾತ್ರಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಹತ್ಯೆಗೈಯ್ಯಲಾಗಿದೆ. ಗಮನಾರ್ಹ ಸಂಗತಿ ಎಂದರೆ ಝರಾಗ್ರಾಮ್ ನಲ್ಲಿ ಸಹ ಇಂದು ಮತದಾನ ನಡೆಯುತ್ತಿದೆ.
ಝರಾಗ್ರಾಮ್ ನ ಗೋಪಿಬಳ್ಳಾಪುರ್ ಪ್ರದೇಶದಲ್ಲಿ ರಾಮ್ ಸಿಂಗ್ ಎಂಬ ಬಿಜೆಪಿ ಕಾರ್ಯಕರ್ತ ಹತ್ಯೆಯಾಗಿದ್ದಾರೆ. 
ಇನ್ನೊಂದು ಘಟನೆಯಲ್ಲಿ ಪಶ್ಚಿಮ ಬಂಗಾಳದ ಭಗಬಾನ್ಪುರ ಮತ್ತು ಪೂರ್ವ ಮೇದಿನಿಪುರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ಬಂಗಾಳದಲ್ಲಿ ಈ ಹಿಂದಿನ ಹಂತಗಳ ಮತದಾನದಲ್ಲಿಯೂ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹಿಂಸಾಚಾರ ಮತ್ತು ಘರ್ಷಣೆಗಳು ನಡೆದಿದ್ದವು. ಏಳು ಹಂತದ ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಬಂಗಾಳದಲ್ಲಿ ಎಂಟು ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com