ಬಿಜೆಪಿಯಿಂದ ಎಷ್ಟು ಮುಸ್ಲಿಂರು ಸಂಸದರಾಗಿದ್ದಾರೆ: ಪ್ರಧಾನಿ ಮೋದಿಗೆ ಓವೈಸಿ ಪ್ರಶ್ನೆ

ದೇಶದಲ್ಲಿ ಮುಸ್ಲಿಂರು ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಳ್ಳುವುದಾದರೆ ಬಿಜೆಪಿಯಿಂದ ಎಷ್ಟು ಮುಸ್ಲಿಂರು ಸಂಸದರಾಗಿ ಆಯ್ಕೆಯಾಗಿದ್ದಾರೆ...
ನರೇಂದ್ರ ಮೋದಿ-ಅಸಾದುದ್ದೀನ್ ಓವೈಸಿ
ನರೇಂದ್ರ ಮೋದಿ-ಅಸಾದುದ್ದೀನ್ ಓವೈಸಿ
Updated on: 
ನವದೆಹಲಿ: ದೇಶದಲ್ಲಿ ಮುಸ್ಲಿಂರು ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಳ್ಳುವುದಾದರೆ ಬಿಜೆಪಿಯಿಂದ ಎಷ್ಟು ಮುಸ್ಲಿಂರು ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮೋದಿಗೆ ಅವರನ್ನು ಪ್ರಶ್ನಿಸಿದ್ದಾರೆ.
ಗೋ ಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆ ಮೇಲೆ ಮಹಾರಾಷ್ಟ್ರದಲ್ಲಿ ಮುಸ್ಲಿಂ ಯುವಕರ ಮೇಲೆ ಹಲ್ಲೆಯಾಗಿದೆ ಎಂಬ ಮಾಧ್ಯಮ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಓವೈಸಿ, ದೇಶದಲ್ಲಿ ಮುಸ್ಲಿಂರು ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ದೇಶದ ಪ್ರತಿಯೊಬ್ಬರ ರಕ್ಷಣೆ ಅಂತ ನರೇಂದ್ರ ಮೋದಿ ಹೇಳುತ್ತಾ ಬಂದಿದ್ದಾರೆ. ಆದರೆ ಇದು ಬರೀ ಬೂಟಾಟಿಕೆ ಹಾಗೂ ವಿರೋಧಭಾಸ ಎಂದು ದೂರಿದರು.
ಮೊಹಮ್ಮದ್ ಅಖ್ಲಾಕ್ ಕೊಲೆ ಮಾಡಿದವರು ಇಂದು ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಕುಳಿತಿರುವುದನ್ನು ಅರಿತುಕೊಳ್ಳಬೇಕು. ಮುಸ್ಲಿಂರು ಆತಂಕದಲ್ಲಿದ್ದಾರೆ ಎಂದು ಪ್ರಧಾನಿ ಮೋದಿ ಭಾವಿಸಿದರೆ ಗೋಮಾಂಸದ ಹೆಸರಿನಲ್ಲಿ ಮುಸ್ಲಿಂ ಯುವಕರ ಮೇಲೆ ಗುಂಡಾಗಳು ನಡೆಸುತ್ತಿರುವ ಹಲ್ಲೆ, ಕೊಲೆಯನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com