ಮಧ್ಯ ಪ್ರದೇಶ: ಆಯತಪ್ಪಿ ಬಾವಿಗೆ ಬಿದ್ದ ಕಾರು, 6 ಮಂದಿ ದುರ್ಮರಣ, ಮೂವರಿಗೆ ಗಾಯ 

ಪ್ರಯಾಣಿಸುತ್ತಿದ್ದ ಕಾರು ಆಯತಪ್ಪಿ ರಸ್ತೆಬದಿಯ ಬಾವಿಗೆ ಬಿದ್ದ ಪರಿಣಾಮ 6 ಮಂದಿ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಛತರ್ಪುರ್ ಜಿಲ್ಲೆಯ ಮಹಾರಾಜಪುರ್ ಎಂಬಲ್ಲಿ ನಡೆದಿದೆ. 
ಬಾವಿಗೆ ಬಿದ್ದ ಕಾರು
ಬಾವಿಗೆ ಬಿದ್ದ ಕಾರು
Updated on: 

ಭೋಪಾಲ್: ಪ್ರಯಾಣಿಸುತ್ತಿದ್ದ ಕಾರು ಆಯತಪ್ಪಿ ರಸ್ತೆಬದಿಯ ಬಾವಿಗೆ ಬಿದ್ದ ಪರಿಣಾಮ 6 ಮಂದಿ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಛತರ್ಪುರ್ ಜಿಲ್ಲೆಯ ಮಹಾರಾಜಪುರ್ ಎಂಬಲ್ಲಿ ನಡೆದಿದೆ. 

ಮದುವೆ ಸಮಾರಂಭ ಮುಗಿಸಿಕೊಂಡು ಕಾರಿನಲ್ಲಿ ಬರುತ್ತಿದ್ದ ವೇಳೆ ಕಳೆದ ರಾತ್ರಿ ಈ ದುರ್ಘಟನೆ ನಡೆದಿದ್ದು, ರಾತ್ರಿ ವೇಳೆಯಾದ ಕಾರಣ ಕಾರು ಚಲಾಯಿಸುತ್ತಿದ್ದವರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. 

ಕಾರಿನಲ್ಲಿ 9 ಮಂದಿ ಇದ್ದರು, ಅವರಲ್ಲಿ 6 ಮಂದಿ ಮೃತಪಟ್ಟಿದ್ದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಹಾರಾಜ್ ಪುರ್ ಪೊಲೀಸ್ ಠಾಣೆಯ ಉಸ್ತುವಾರಿ ಜೆ ವೈ ಖಾನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com