ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್ ನಿಂದ ಸಂಜಯ್ ಝಾ ಉಚ್ಚಾಟನೆ

ರಾಜಸ್ಥಾನದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಸಚಿನ್ ಪೈಲಟ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಮತ್ತೊಬ್ಬ ಕೈ ಮುಖಂಡ ಸಂಜಯ್ ಝಾ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ.
ಸಂಜಯ್ ಝಾ
ಸಂಜಯ್ ಝಾ
Updated on

ಮುಂಬಯಿ: ರಾಜಸ್ಥಾನದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಸಚಿನ್ ಪೈಲಟ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಮತ್ತೊಬ್ಬ ಕೈ ಮುಖಂಡ ಸಂಜಯ್ ಝಾ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ.

ತಕ್ಷಣವೇ ಜಾರಿಗೆ ಬರುವಂತೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಸಾಹೇಬ್ ಠ್ರೋಟ್ ಆದೇಶ ಹೊರಡಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಾಗೂ ಶಿಸ್ತು ನಿಯಮ ಉಲ್ಲಂಘನೆ ಕಾರಣಕ್ಕೆ ಮಹಾರಾಷ್ಟ್ರದ ಸಂಜಯ್ ಝಾ ಅವರನ್ನ ಉಚ್ಛಾಟಿಸಲಾಗಿದೆ. ಮಹಾರಾಷ್ಟ್ರ ಘಟಕದ  ಕಾಂಗ್ರೆಸ್ ಪಕ್ಷ ನಿನ್ನೆ ಮಂಗಳವಾರ ಈ ಶಿಸ್ತಿನ ಕ್ರಮ ಕೈಗೊಂಡಿರುವುದನ್ನ ಟ್ವೀಟ್ ಮಾಡಿದೆ.

ಸಚಿನ್ ಪೈಲಟ್ ಅವರನ ನಡೆಯನ್ನು ಝಾ ಸಮರ್ಥಿಸಿಕೊಂಡಿದ್ದರು, ಹಾಗೂ ಟಿವಿ ಚಾನಲ್ ನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಾರ್ಚ್ ತಿಂಗಳಲ್ಲಿ ಸಂಜಯ್ ಝಾ ಅವರು ಪಕ್ಷದ ಬಗ್ಗೆ ಕಟು ಟೀಕೆ ಮಾಡಿ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರು. ಹೀಗಾಗಿ ಅವರನ್ನು ಪಕ್ಷದ ಹುದ್ದೆಯಿಂದ ಅಮಾನತು ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com