

ನವದೆಹಲಿ: ಕೊರೋನಾ ವೈರಸ್ ಭೀತಿ ದೇಶದಾದ್ಯಂತ ಹೆಚ್ಚಾಗುತ್ತಿದ್ದು, ಸೋಂಕಿತ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 105ಕ್ಕೆ ತಲುಪಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ವೈರಸ್ ಪತ್ತೆಯಾಗಿದೆ,
ಈ ನಡುವೆ ತೆಲಂಗಾಣ ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ವೈರಸ್ ಪತ್ತೆಯಾಗಿದ್ದು, ಈ ವ್ಯಕ್ತಿ ಇಟಲಿಯಿಂದ ಕೆಲ ದಿನಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದ ಎಂದು ಹೇಳಲಾಗುತ್ತಿದೆ. ಪ್ರಸ್ತುತ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಇಟಲಿಯ ಮಿಲಾನ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸುತ್ತಿದ್ದ 211 ಮಂದಿ ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಏರ್ ಇಂಡಿಯಾ ವಿಮಾನ ಈ ಎಲ್ಲಾ ಭಾರತೀಯರನ್ನು ತವರಿಗೆ ಕರೆ ತರುತ್ತಿದೆ ಎಂದು ವರದಿಗಲು ತಿಳಿಸಿವೆ.
ಕೊರೋನಾ ಪೀಡಿತ ಇರಾನ್ ರಾಷ್ಟ್ರದಿಂದಲೂ ಸಂಕಷ್ಟದಲ್ಲಿದ್ದ 236 ಭಾರತೀಯರನ್ನು ಭಾರತೀಯ ಸೇನಾಪಡೆಗಳು ರಕ್ಷಣೆ ಮಾಡಿದ್ದು, 15 ದಿನಗಳ ತೀವ್ರ ಆರೋಗ್ಯ ತಪಾಸಣೆಗಳ ಬಳಿಕ ಎಲ್ಲಾ ಭಾರತೀಯರನ್ನು ತವರಿಗೆ ಕರೆ ತರುತ್ತಿದೆ.