ಗೆಳೆಯನೊಂದಿಗೆ ಲೇಟ್ ನೈಟ್ ಪಾರ್ಟಿಗೆ ಬೈದ ತಾಯಿ, ಲಾಕ್‌ಡೌನ್‌ನಿಂದ ಖಿನ್ನತೆಗೊಳಗಾದ ಮಾಡೆಲ್ ಆತ್ಮಹತ್ಯೆಗೆ ಶರಣು!

ಬಾಯ್ ಫ್ರೆಂಡ್ ಭೇಟಿ ಮಾಡಿದ್ದಕ್ಕೆ ತಾಯಿ ಬೈದಿದ್ದು ಅಲ್ಲದೆ ಕೊರೋನಾ ಲಾಕ್ ಡೌನ್ ಮನೆಯಲ್ಲೇ ಬಂಧಿಯಾಗಿದ್ದ ಮಾಡೆಲ್ ಒಬ್ಬರು 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. 
ಪ್ರಿಯಾ
ಪ್ರಿಯಾ
Updated on

ಗ್ರೇಟರ್ ನೋಯ್ಡಾ: ಬಾಯ್ ಫ್ರೆಂಡ್ ಭೇಟಿ ಮಾಡಿದ್ದಕ್ಕೆ ತಾಯಿ ಬೈದಿದ್ದು ಅಲ್ಲದೆ ಕೊರೋನಾ ಲಾಕ್ ಡೌನ್ ಮನೆಯಲ್ಲೇ ಬಂಧಿಯಾಗಿದ್ದ ಮಾಡೆಲ್ ಒಬ್ಬರು 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು ಪ್ರಿಯಾ ಅಲಿಯಾಸ್ ಭಾವನಾ ಆತ್ಮಹತ್ಯೆಗೆ ಶರಣಾದ ಮಾಡೆಲ್. ಲಾಕ್ ಡೌನ್ ಮುಂಚೆ ಪ್ರಿಯಾ ಮುಂಬೈನಲ್ಲಿ ವಾಸವಾಗಿದ್ದು ಮಾಡೆಲಿಂಗ್ ನಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆದರೆ ಬ್ಯಾಕ್ ಟು ಬ್ಯಾಕ್ ಲಾಕ್ ಡೌನ್ ನಿಂದಾಗಿ ಖಿನ್ನತೆಗೆ ಒಳಗಾಗಿದ್ದಳು. 

ಇನ್ನು ಮುಂಬೈನಿಂದ ಸಹೋದರಿ ವಾಸಿಸುತ್ತಿದ್ದ ಗ್ರೇಟರ್ ನೋಯ್ಡಾದ ಅಪಾರ್ಟ್ ಮೆಂಟ್ ಗೆ ಬಂದಿದ್ದ ಪ್ರಿಯಾಳನ್ನು ಭೇಟಿಯಾಗಲು ಮುಂಬೈನಿಂದ ಬಾಯ್ ಫ್ರೆಂಡ್ ಸಹ ಬಂದಿದ್ದನು. ಇದನ್ನು ಕಂಡ ತಾಯಿ ಗದರಿದ್ದರು. 

ಈ ಎಲ್ಲಾ ವಿಚಾರಗಳಿಂದ ಮನನೊಂದ ಪ್ರಿಯಾ ಕಳೆದ ರಾತ್ರಿ ಅಪಾರ್ಟಮೆಂಟ್ ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com