ಖ್ಯಾತ ಮಲಯಾಳಂ ಕವಿ ವಿಷ್ಣುನಾರಾಯಣನ್ ನಂಬೂದರಿ ವಿಧಿವಶ, ಪ್ರಧಾನಿ ಸಂತಾಪ

ಪ್ರಸಿದ್ಧ ಮಲಯಾಳಂ ಕವಿ ವಿಷ್ಣುನಾರಾಯಣನ್ ನಂಬೂದರಿ ತಿರುವನಂತಪುರಂನಲ್ಲಿ ಗುರುವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ರಾಜ್ಯ ರಾಜಧಾನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಧ್ಯಾಹ್ನ ನಿಧನ ಹೊಂದಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

Published: 25th February 2021 10:45 PM  |   Last Updated: 25th February 2021 10:45 PM   |  A+A-


ವಿಷ್ಣುನಾರಾಯಣನ್ ನಂಬೂದರಿ

Posted By : Raghavendra Adiga
Source : Online Desk

ತಿರುವನಂತಪುರಂ: ಪ್ರಸಿದ್ಧ ಮಲಯಾಳಂ ಕವಿ ವಿಷ್ಣುನಾರಾಯಣನ್ ನಂಬೂದರಿ ತಿರುವನಂತಪುರಂನಲ್ಲಿ ಗುರುವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ರಾಜ್ಯ ರಾಜಧಾನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಧ್ಯಾಹ್ನ ನಿಧನ ಹೊಂದಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಮಕಾಲೀನ ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ಪಕವಾಗಿ ಮೆಚ್ಚುಗೆ ಪಡೆದ ಕವಿಗಳಲ್ಲಿ ಒಬ್ಬರಾದ ನಂಬೂದರಿ (81) ಅವರಿಗೆ 2014 ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.

ಪತ್ತನಂತಿಟ್ಟಜಿಲ್ಲೆಯ ತಿರುವಳ್ಳಾದಲ್ಲಿ ಜನಿಸಿದ ನಂಬೂದರಿಯವರ ಕೃತಿಗಳು ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವಾಗಿದೆ.

ಅವರು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಾಹಿತ್ಯ ಗೌರವಗಳಿಗೆ ಭಾಜನರಾಗಿದ್ದಾರೆ.

"ಸ್ವಾತಂಧ್ರಿಯಾತೆ-ಕುರಿತ್ ಒರು ಗೀತಮ್", "ಭೂಮಿಗೀತಂಗಳ್", "ಇಂಡಿಯಾ ಎನ್ನಾ ವಿಕಾರಂ", "ಅಪರಾಜಿತಾ", "ಆರಣ್ಯಕಂ", "ಪ್ರಣಯಗೀತಂಗಳ್", "ಉಜ್ಜಯಿನಿಲೆ ರಾಪ್ಪಕಲುಕಲ್" ಇನ್ನೂ ಮೊದಲಾದವು ಇವರ ಕೆಲ ಮುಖ್ಯ ಕೃತಿಗಳಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ

ನಂಬೂದರಿಯವರ ನಿಧನದಿಂದ ತಮಗೆ ಬೇಸರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ."ವಿಷ್ಣುನಾರಾಯಣನ್ ನಂಬೂದರಿ ನಿಧನದಿಂದ ನೋವಾಗಿದೆ.ಸಂಸ್ಕೃತಿ ಮತ್ತು ಸಾಹಿತ್ಯ ಜಗತ್ತಿಗೆ ಅವರ ಮಹತ್ವದ ಕೊಡುಗೆಯನ್ನು ಸ್ಮರಿಸಬೇಕು.ಅವರಕೃತಿಗಳು ಸಹಾನುಭೂತಿ ಮತ್ತು ಸೂಕ್ಷ್ಮತೆಯನ್ನು ಪ್ರತಿಬಿಂಬಿಸುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp