ಗಾಜಿಯಾಬಾದ್ ಬೆನ್ನಲ್ಲೇ ಮತ್ತೊಂದು ಘಟನೆ: ನೋಯ್ಡಾದ ಲಿಫ್ಟ್ ನಲ್ಲಿ ನಾಯಿ ದಾಳಿ, ವಿಡಿಯೋ ವೈರಲ್

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹೌಸಿಂಗ್ ಸೊಸೈಟಿ ಲಿಫ್ಟ್ ನೊಳಗೆ ಸಾಕು ನಾಯಿಯೊಂದು ಬಾಲಕನನ್ನು ಕಚ್ಚುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಬೆನ್ನಲ್ಲೇ ನೋಯ್ಡಾದಲ್ಲಿ ನಾಯಿ ದಾಳಿಯ ಮತ್ತೊಂದು ವೀಡಿಯೊ ಹೊರಬಿದ್ದಿದೆ.
ನಾಯಿ ದಾಳಿ ಫೋಟೋ
ನಾಯಿ ದಾಳಿ ಫೋಟೋ
Updated on

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹೌಸಿಂಗ್ ಸೊಸೈಟಿ ಲಿಫ್ಟ್ ನೊಳಗೆ ಸಾಕು ನಾಯಿಯೊಂದು ಬಾಲಕನನ್ನು ಕಚ್ಚುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಬೆನ್ನಲ್ಲೇ ನೋಯ್ಡಾದಲ್ಲಿ ನಾಯಿ ದಾಳಿಯ ಮತ್ತೊಂದು ವೀಡಿಯೊ ಹೊರಬಿದ್ದಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆಯು ನೋಯ್ಡಾದ ಸೆಕ್ಟರ್ 75 ನಲ್ಲಿರುವ ಅಪೆಕ್ಸ್ ಅಥೇನಾ ಸೊಸೈಟಿಯಲ್ಲಿ ನಡೆದಿದೆ.

ವೀಡಿಯೊ ಕ್ಲಿಪ್‌ನಲ್ಲಿ ಹುಡುಗನೊಬ್ಬ ನಾಯಿಯನ್ನು ಹಿಡಿದುಕೊಂಡು ಹೋಗುತ್ತಿರುವಾಗ ಇನ್ನೊಬ್ಬ ವ್ಯಕ್ತಿ ದೂರದಲ್ಲಿ ಲಿಫ್ಟ್ ನ ಬಾಗಿಲಿನ ಬಳಿ ನಿಂತಿದ್ದಾನೆ. ಲಿಫ್ಟ್ ನಿಂತ ವೇಳೆ ಹುಡುಗ ಲಿಫ್ಟ್ ನಿಂದ ಹೊರಬರಲು ಯತ್ನಿಸುವಾಗ ನಾಯಿಯು ವ್ಯಕ್ತಿಯ ಕಡೆ ನುಗ್ಗಿದೆ. ವ್ಯಕ್ತಿಯು ತನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ನೆಲದ ಮೇಲೆ ಬಿದ್ದಿದ್ದಾರೆ.

ನಾಯಿಯ ಮಾಲೀಕರು ತನ್ನ ನಾಯಿಯನ್ನು ನಿಯಂತ್ರಿಸಲು ಮತ್ತು ಅದನ್ನು ಲಿಫ್ಟ್ ನಿಂದ ಎಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಗಾಜಿಯಾಬಾದ್‌ನ ರಾಜನಗರ ವಿಸ್ತರಣೆಯಲ್ಲಿರುವ ಚಾರ್ಮ್ಸ್ ಕ್ಯಾಸಲ್ ಸೊಸೈಟಿಯ ಲಿಫ್ಟ್‌ನಲ್ಲಿ ಮಹಿಳೆಯೊಬ್ಬರು ತನ್ನ ನಾಯಿ ಜಿಗಿದು ಕಚ್ಚಿದ ನಂತರ ಹುಡುಗನಿಗೆ ಸಹಾಯ ಮಾಡದಿದ್ದಕ್ಕಾಗಿ ದೂಷಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.

ಆ ಹುಡುಗ ನೋವಿನಿಂದ ಒದ್ದಾಡುತ್ತಿದ್ದರೂ ಕ್ಷಮೆಯಾಚಿಸದೆ ಲಿಫ್ಟ್ ನಿಂದ ಹೊರಬಂದಿದ್ದ ಮಹಿಳೆ ಬಾಲಕನ ತಂದೆಯ ಜೊತೆಯೂ ಜಗಳವಾಡಿದ್ದ ವಿಡಿಯೋ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com