ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ, ಮನೆ ಬದಲಾವಣೆ ಎಲ್ಲಿಗೆ...?

ಲೋಕಸಭೆ ಸದಸ್ಯತ್ವ ಕಳೆದುಕೊಂಡಿರುವುದರಿಂದ ಏ.22 ರ ವೇಳೆಗೆ  ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಂಗಲೆ ಖಾಲಿ ಮಾಡುತ್ತಿದ್ದಾರೆ. 
ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ
ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ಲೋಕಸಭೆ ಸದಸ್ಯತ್ವ ಕಳೆದುಕೊಂಡಿರುವುದರಿಂದ ಏ.22 ರ ವೇಳೆಗೆ  ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಂಗಲೆ ಖಾಲಿ ಮಾಡುತ್ತಿದ್ದಾರೆ. 

12, ತುಘ್ಲಕ್ ಲೇನ್ ನಿವಾಸವನ್ನು ರಾಹುಲ್ ಗಾಂಧಿ ತೊರೆದಿದ್ದಾರೆ. ಅವರ ನಿವಾಸದ ಎದುರು ನಿಂತಿದ್ದ 2 ಟ್ರಕ್ ಗಳ ಮೂಲಕ ತಮ್ಮ ವಸ್ತುಗಳನ್ನು, 10, ಜನ್ಪಥ್ ನಲ್ಲಿರುವ ತಮ್ಮ ತಾಯಿಯ ಮನೆಗೆ ವರ್ಗಾಯಿಸುತ್ತಿದ್ದಾರೆ.
 
ಶೀಘ್ರವೇ ರಾಹುಲ್ ಗಾಂಧಿ ಬಂಗಲೆಯಿಂದ ಹೊರನಡೆಯಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
ಮತ್ತೊಂದು ಮನೆಗಾಗಿ ರಾಹುಲ್ ಗಾಂಧಿ ಹುಡುಕುತ್ತಿದ್ದು, ತಮ್ಮ ತಾಯಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಟ್ಟಿಗೆ ಇರುವ ಆಯ್ಕೆಯನ್ನೂ ರಾಹುಲ್ ಗಾಂಧಿ ಪರಿಗಣಿಸುತ್ತಿದ್ದಾರೆ.

ಇದನ್ನೂ ಓದಿ: ನವದೆಹಲಿ: ಏಪ್ರಿಲ್ 22 ರೊಳಗೆ ಅಧಿಕೃತ ಬಂಗಲೆ ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ಸೂಚನೆ
 
ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಶಿಕ್ಷೆ ಮತ್ತು ಶಿಕ್ಷೆಯ ನಂತರ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಏಪ್ರಿಲ್ 22 ರೊಳಗೆ ನಿವೇಶನವನ್ನು ಖಾಲಿ ಮಾಡುವಂತೆ ಲೋಕಸಭೆ ಸೆಕ್ರೆಟರಿಯೇಟ್ ಗಾಂಧಿ ಅವರಿಗೆ ನೋಟಿಸ್ ಕಳುಹಿಸಿತ್ತು.

ಕೆಲವು ವರ್ಷಗಳ ಹಿಂದೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಲಾಗಿದ್ದ ಎಸ್‌ಪಿಸಿ ಭದ್ರತೆ ತೆಗೆದುಹಾಕಿದ್ದರಿಂದ ಅವರಿದ್ದ ಲೋಧಿ ಎಸ್ಟೇಟ್ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಲಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com