ಜುಲೈ 30 ರಂದು ಭಾರತದಿಂದ 7 ಸಿಂಗಾಪುರ ಉಪಗ್ರಹಗಳ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜುಲೈ 30 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆರು ಸಹ-ಪ್ರಯಾಣಿಕ ಉಪಗ್ರಹಗಳೊಂದಿಗೆ ಸಿಂಗಾಪುರದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜುಲೈ 30 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆರು ಸಹ-ಪ್ರಯಾಣಿಕ ಉಪಗ್ರಹಗಳೊಂದಿಗೆ ಸಿಂಗಾಪುರದ DS-SAR ಉಪಗ್ರಹ ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(PSLV-C56) ಅನ್ನು ಉಡಾವಣೆ ಮಾಡಲಿದೆ.

ಮೊದಲ ಉಡಾವಣಾ ಕೇಂದ್ರದಿಂದ ಬೆಳಗ್ಗೆ 6.30ಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

DS-SAR ಉಪಗ್ರಹವನ್ನು ಸಿಂಗಾಪುರದ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(DSTA) (ಸಿಂಗಾಪೂರ ಸರ್ಕಾರವನ್ನು ಪ್ರತಿನಿಧಿಸುತ್ತದೆ) ಮತ್ತು ST ಇಂಜಿನಿಯರಿಂಗ್ ಜೊತೆ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಒಮ್ಮೆ ನಿಯೋಜಿಸಿದ ಮತ್ತು ಕಾರ್ಯಾಚರಣೆಯ ನಂತರ, ಸಿಂಗಾಪುರ ಸರ್ಕಾರದ ವಿವಿಧ ಏಜೆನ್ಸಿಗಳ ಅಗತ್ಯಗಳಿಗೆ ತಕ್ಕಂತೆ ಉಪಗ್ರಹ ಚಿತ್ರಗಳನ್ನು ಸೆರೆಹಿಡಿದು ಕಳುಹಿಸಲಿದೆ. ಎಸ್ ಟಿ ಇಂಜಿನಿಯರಿಂಗ್ ತನ್ನ ವಾಣಿಜ್ಯ ಗ್ರಾಹಕರಿಗೆ ಬಹು-ಮಾದರಿ ಮತ್ತು ಹೆಚ್ಚಿನ ಗುಣಮಟ್ಟದ ಚಿತ್ರಗಳನ್ನು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಬಳಸಲಿದೆ.

ಇದನ್ನು ಓದಿ: ಚಂದ್ರಯಾನ-3 ಯಶಸ್ವಿ ಉಡಾವಣೆ: ಕ್ಯಾಮೆರಾ ವಿನ್ಯಾಸಕ ಅನುಜ್ ನಂದಿ ಕುಟುಂಬದಲ್ಲಿ ಕಳೆಕಟ್ಟಿದ ಸಂಭ್ರಮ!​
        
        
ವಾಣಿಜ್ಯ ಕಾರ್ಯಾಚರಣೆಯ ಅಂಗವಾಗಿ ಭಾರತ ಸುಮಾರು 360 ಕೆಜಿ ತೂಕದ ಸಿಂಗಾಪುರದ DS-SAR ಉಪಗ್ರಹವನ್ನು ಹೊತ್ತೊಯ್ಯಲಿದೆ. ಜೊತೆಗೆ ಆರು ಸಹ-ಪ್ರಯಾಣಿಕ ಸಣ್ಣ ಉಪಗ್ರಹಗಳಾದ VELOX-AM, ARCADE, SCOOB-II, NuLIoN, Galassia-2 ಮತ್ತು ORB-12 STRIDER ಗಳನ್ನು ಸಹ ಕಕ್ಷೆಗೆ ತಲುಪಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com