ಲಡಾಖ್ ಸಂಪರ್ಕಿಸುವ ಶಿಂಕುನ್ ಲಾ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅಸ್ತು

ಲಡಾಖ್‌ನ ಗಡಿ ಪ್ರದೇಶಗಳಿಗೆ ಎಲ್ಲಾ ಹವಾಮಾನದಲ್ಲೂ ಸಂಪರ್ಕ ಕಲ್ಪಿಸಲು ಶಿಂಕುನ್ ಲಾದಲ್ಲಿ 4.1 ಕಿ.ಮೀ ಉದ್ದದ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಲಡಾಖ್ ಗಡಿ ಪ್ರದೇಶಕ್ಕೆ ಸೇನಾ ಸಾಮಾಗ್ರಿಗಳನ್ನು ಹೊತ್ತೊಯ್ಯುತ್ತಿರುವ ಸೇನಾಪಡೆ
ಲಡಾಖ್ ಗಡಿ ಪ್ರದೇಶಕ್ಕೆ ಸೇನಾ ಸಾಮಾಗ್ರಿಗಳನ್ನು ಹೊತ್ತೊಯ್ಯುತ್ತಿರುವ ಸೇನಾಪಡೆ

ನವದೆಹಲಿ: ಲಡಾಖ್‌ನ ಗಡಿ ಪ್ರದೇಶಗಳಿಗೆ ಎಲ್ಲಾ ಹವಾಮಾನದಲ್ಲೂ ಸಂಪರ್ಕ ಕಲ್ಪಿಸಲು ಶಿಂಕುನ್ ಲಾದಲ್ಲಿ 4.1 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ನಿಮು-ಪಡಮ್-ದರ್ಚಾ ರಸ್ತೆ ಸಂಪರ್ಕಿಸಲು 4.1-ಕಿಮೀ ಉದ್ದದ ಶಿಂಕುನ್ ಲಾ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

1,681 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಸೆಂಬರ್ 2025 ರೊಳಗೆ ಈ ಸುರಂಗವನ್ನು ಪೂರ್ಣಗೊಳಿಸಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ.

ಶಿಂಕುನ್ ಲಾ ಸುರಂಗವು ಲಡಾಖ್‌ಗೆ ಎಲ್ಲಾ ಹವಾಮಾನದಲ್ಲೂ ಸಂಪರ್ಕ ಕಲ್ಲಿಸುವ ರಸ್ತೆಯಾಗಲಿದೆ ಮತ್ತು ಇದು ಕೇಂದ್ರಾಡಳಿತ ಪ್ರದೇಶದ ಗಡಿ ಪ್ರದೇಶಗಳಿಗೆ ಕಡಿಮೆ ಅಂತರದ ಮಾರ್ಗವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com