ದೇಶ

ಕಮಲಾ ಪಸಂದ್ ಪಾನ್ ಮಸಾಲಾ ಮಾಲೀಕನ ಸೊಸೆಯ ದುರಂತ ಅಂತ್ಯ: ದೀಪ್ತಿ ಚೌರಾಸಿಯಾ ಆತ್ಮಹತ್ಯೆ

ಕಮಲಾ ಪಸಂದ್ ಪಾನ್ ಮಸಾಲಾ ಮಾಲೀಕನ ಸೊಸೆಯ ದುರಂತ ಅಂತ್ಯ: ದೀಪ್ತಿ ಚೌರಾಸಿಯಾ ಆತ್ಮಹತ್ಯೆ
ದೀಪ್ತಿ ಚೌರಾಸಿಯಾ
Published On :

ನವದೆಹಲಿ: ಕಮಲಾ ಪಸಂದ್ ಪಾನ್ ಮಸಾಲಾ ಕಂಪನಿಯ ಮಾಲೀಕ ಕಮಲ್ ಕಿಶೋರ್ ಅವರ ಸೊಸೆ ದೀಪ್ತಿ ಚೌರಾಸಿಯಾ (40) ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಡೈರಿಯೊಂದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಆಕೆಯ ಪತಿ ಹರ್‌ಪ್ರೀತ್ ಚೌರಾಸಿಯಾ ಅವರೊಂದಿಗಿನ ವಿವಾದದ ಬಗ್ಗೆ ಉಲ್ಲೇಖಿಸಿದ್ದಾರೆ.

ದೀಪ್ತಿ 2010 ರಲ್ಲಿ ಹರ್‌ಪ್ರೀತ್ ಅವರನ್ನು ವಿವಾಹವಾದರು. ದಂಪತಿಗೆ 14 ವರ್ಷದ ಮಗನಿದ್ದಾನೆ. ಮೂಲಗಳ ಪ್ರಕಾರ, ಅವರು ದುಪಟ್ಟಾ ಬಳಸಿ ನೇಣು ಬಿಗಿದುಕೊಂಡಿದ್ದಾರೆ. ದೀಪ್ತಿ ಕೋಣೆಯಲ್ಲಿ ಕಂಡುಬಂದ ಒಂದು ಡೆತ್ ನೋಟ್ ನಲ್ಲಿ ಅವರು ಯಾರನ್ನೂ ದೂಷಿಸುವುದಿಲ್ಲ ಎಂದು ಬರೆಯಲಾಗಿದೆ.

ಸಂಬಂಧದಲ್ಲಿ ಪ್ರೀತಿ ಮತ್ತು ನಂಬಿಕೆ ಇಲ್ಲದಿದ್ದರೆ, ಜೀವನದ ಅರ್ಥವೇನು? ಎಂದು ಉಲ್ಲೇಖಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಕೌಟುಂಬಿಕ ಸಮಸ್ಯೆಗಳು ದೀಪ್ತಿಯನ್ನು ಸಾವಿನ ಅಂಚಿಗೆ ತಳ್ಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ. ವೈದ್ಯರ ತಂಡವು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತ ಪ್ರಕರಣದ ಬಗ್ಗೆ ಪೊಲೀಸರು ಇನ್ನೂ ಸಾರ್ವಜನಿಕ ಹೇಳಿಕೆ ನೀಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.