ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ CM ಗದ್ದುಗೆ! ನಾಳೆ ನಿತೀಶ್ ರಾಜೀನಾಮೆ? ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ

ಸಿಎಂ ಆಯ್ಕೆಗಾಗಿ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನೇಮಿಸಿದ್ದು, ಅವರು ನಾಳೆ ಬಿಹಾರಕ್ಕೆ ಆಗಮಿಸುವುದರೊಂದಿಗೆ ಬಿಜೆಪಿಯ ಮೊದಲ ಸಿಎಂ ಹೆಸರು ಗೊತ್ತಾಗಲಿದೆ ಎಂದು ಬಿಜೆಪಿ ನಾಯಕರು ಸೋಮವಾರ ಹೇಳಿದ್ದಾರೆ.
Bihar CM Nitish Kumar
ಬಿಹಾರ ಸಿಎಂ ನಿತೀಶ್ ಕುಮಾರ್
Updated on

ಪಾಟ್ನಾ: ಬಿಹಾರದ ಸುಧೀರ್ಘ ಜೆಡಿಯು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ನಿತೀಶ್ ಕುಮಾರ್ ಅವಧಿ ಅಂತ್ಯಕ್ಕೆ ಸಾಗಿದ್ದು, ಇದೀಗ ಬಿಜೆಪಿಯ ಮೊದಲ ಸಿಎಂ ಯಾರು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಸಿಎಂ ಆಯ್ಕೆಗಾಗಿ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನೇಮಿಸಿದ್ದು, ಅವರು ನಾಳೆ ಬಿಹಾರಕ್ಕೆ ಆಗಮಿಸುವುದರೊಂದಿಗೆ ಬಿಜೆಪಿಯ ಮೊದಲ ಸಿಎಂ ಹೆಸರು ಗೊತ್ತಾಗಲಿದೆ ಎಂದು ಬಿಜೆಪಿ ನಾಯಕರು ಸೋಮವಾರ ಹೇಳಿದ್ದಾರೆ.

ಬಿಹಾರದ ಸುದೀರ್ಘ ಅವಧಿಯ ಸಿಎಂ ಆಗಿರುವ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯು ಭಾನುವಾರ 'ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನೇಮಿಸಿದೆ.

ಕಳೆದ ತಿಂಗಳು 75 ನೇ ವರ್ಷಕ್ಕೆ ಕಾಲಿಟ್ಟ ಮತ್ತು ವಾರದ ಹಿಂದೆ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರ್ ನಾಳೆ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿರುವ ಕೊನೆಯ ಕ್ಯಾಬಿನೆಟ್ ಸಭೆಯ ನಂತರ ರಾಜಭವನಕ್ಕೆ ಭೇಟಿ ನೀಡಿ, ಅಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆಯಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರು ನಾಳೆ ಪಾಟ್ನಾಗೆ ಆಗಮಿಸಲಿದ್ದು, ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದು ಪಕ್ಷದ ಬಿಹಾರ ಘಟಕದ ಅಧ್ಯಕ್ಷ ಸಂಜಯ್ ಸರೋಗಿ ಸುದ್ದಿಗಾರರಿಗೆ ತಿಳಿಸಿದರು.

ಹಿಂದಿ ಹಾರ್ಟ್ ಲ್ಯಾಂಡ್ ನಲ್ಲಿ ಇಲ್ಲಿಯವರೆಗೂ ಬಿಜೆಪಿ ಮುಖ್ಯಮಂತ್ರಿ ಹುದ್ದೆಯಿಲ್ಲದ ಏಕೈಕ ರಾಜ್ಯವಾಗಿದ್ದ ಬಿಹಾರದಲ್ಲಿ ಇದೀಗ ಗದ್ದುಗೆ ಹಿಡಿಯುವ ಅವಕಾಶ ದೊರೆತಿದ್ದು, ಪಕ್ಷದ ನಾಯಕರು ಜಾಗರೂಕರಾಗಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವವರೆಗೆ ರಾಜ್ಯಾಧ್ಯಕ್ಷರಾಗಿದ್ದ ಸಚಿವ ದಿಲೀಪ್ ಜೈಸ್ವಾಲ್, "ಇದು ನಮಗೆ ಭಾವನಾತ್ಮಕ ಕ್ಷಣವಾಗಿದೆ. ಹೊಸ ಸರ್ಕಾರಕ್ಕೆ ನಿತೀಶ್ ಕುಮಾರ್ ಅವರು ತಮ್ಮ ಮಾರ್ಗದರ್ಶನವನ್ನು ಮುಂದುವರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

243-ಬಲದ ಬಿಹಾರ ಅಸೆಂಬ್ಲಿಯಲ್ಲಿ, NDA ಒಟ್ಟು 202 ಸ್ಥಾನಗಳೊಂದಿಗೆ ಬಹುಮತವನ್ನು ಹೊಂದಿದೆ, ಅದರಲ್ಲಿ ಬಿಜೆಪಿ 89 ರಲ್ಲಿ ಸಿಂಹ ಪಾಲನ್ನು ಹೊಂದಿದೆ. ನಂತರ JD(U) ನ 85 ಸ್ಥಾನ ಹೊಂದಿದ್ದು, ಉಳಿದಂತೆ LJP(RV), HAM ಮತ್ತು RLM ಕೆಲವು ಸ್ಥಾನಗಳನ್ನು ಹೊಂದಿವೆ.

Bihar CM Nitish Kumar
ನಿತೀಶ್ ಕುಮಾರ್ ಪುತ್ರ ನಿಶಾಂತ್ ಮುಂದಿನ CM; ಪಾಟ್ನಾ ಜೆಡಿಯು ಕಚೇರಿ ಮುಂದೆ ಪೋಸ್ಟರ್‌!

ನೂತನ ಸಿಎಂ ಯಾರಾಗಬಹುದು?

ನೂತನ ಸಿಎಂ ಯಾರಾಗಬಹುದು ಎಂಬ ಪತ್ರಕರ್ತರ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಜೈಸ್ವಾಲ್, ಶಿವರಾಜ್ ಸಿಂಗ್ ಚೌಹಾಣ್ ನಾಳೆ ಬರಲಿ. ಎಲ್ಲವೂ ಸ್ಪಷ್ಟವಾಗುತ್ತದೆ" ಎಂದು ಹೇಳಿದರು.

ನೂತನ ಸಿಎಂ ಪ್ರಮಾಣ ವಚನ ನಾಳೆ ನಡೆಯಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ನೂತನ ಸಿಎಂ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com