ಪೊಲೀಸಪ್ಪನ ಅಕ್ರಮ ಸಂಬಂಧಕ್ಕೆ ಇಬ್ಬರು ಬಲಿ: ಕಾನ್ಸ್‌ಟೇಬಲ್‌ನ ಪತ್ನಿ, ಮಗುವನ್ನು ಇರಿದು ಕೊಂದ ಯುವತಿ!

ಮದುವೆಯಾಗಿ ಮೂರು ಮಕ್ಕಳಿದ್ದ ಪೊಲೀಸ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿ ಸರೋಜಿನಿ ಭಾರದ್ವಾಜ್ ಅವರು ಇಂದು ಬೆಳಗ್ಗೆ ಆತನ ಪತ್ನಿ ಮತ್ತು ಮಗುವನ್ನು ಹತ್ಯೆ ಮಾಡಿದ್ದಾರೆ.
Chhattisgarh Constable's Lover Stabs His Wife, Son To Death
ರೀನಾ ಹಾಗೂ ಲಲಿತೇಶ್ ಯಾದವ್
Updated on

ರಾಯ್‌ಪುರ: ಛತ್ತೀಸ್‌ಗಢದಲ್ಲಿ 25 ವರ್ಷದ ಯುವತಿಯೊಬ್ಬರು ತಾನು ಪ್ರೀತಿಸುತ್ತಿದ್ದ ವಿವಾಹಿತ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ಮನೆಗೆ ಬಲವಂತವಾಗಿ ನುಗ್ಗಿ, ಅವರ ಪತ್ನಿ ಮತ್ತು ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಶನಿವಾರ ಘಟನೆ ನಡೆದಿದೆ.

ಮದುವೆಯಾಗಿ ಮೂರು ಮಕ್ಕಳಿದ್ದ ಪೊಲೀಸ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿ ಸರೋಜಿನಿ ಭಾರದ್ವಾಜ್ ಅವರು ಇಂದು ಬೆಳಗ್ಗೆ ಊರಿಗೆ ಹೋಗಲು ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾಗ ದುರ್ಗದಲ್ಲಿರುವ ಕಾನ್ಸ್‌ಟೇಬಲ್ ಲಲಿತೇಶ್ ಯಾದವ್ ಮನೆಗೆ ಹೋಗಿದ್ದಾಳೆ.

ಮನೆಯೊಳಗೆ ನುಗ್ಗಿದ ಸರೋಜಿನಿ ಲಲಿತೇಶ್ ಯಾದವ್​​ನ ಹೆಂಡತಿ ರೀನಾ ಯಾದವ್ ಜೊತೆ ಜಗಳವಾಡಿದ್ದಾಳೆ. ಈ ಜಗಳದ ನಡುವೆ ಆಕೆ ಕೋಪದಿಂದ ರೀನಾಳಿಗೆ ಚಾಕುವಿನಿಂದ ಚುಚ್ಚಿದ್ದು, ನಂತರ ಆಕೆಯ ಮೂವರು ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾಳೆ.

ಬಳಿಕ ರೂಂಗೆ ಹೋಗಿ ಅಲ್ಲಿ ಹಾಸಿಗೆಯ ಮೇಲೆ ನಿದ್ರೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಮಗುವಿಗೆ ಪದೇಪದೇ ಚಾಕುವಿನಿಂದ ಇರಿದ ಹಿನ್ನೆಲೆಯಲ್ಲಿ ಆತ ಅಲ್ಲೇ ಸಾವನ್ನಪ್ಪಿದ್ದಾನೆ. ರೀನಾಳಿಗೂ ಮನಸೋ ಇಚ್ಛೆ ಇರಿದಿದ್ದರಿಂದ ಆಕೆಯೂ ಮೃತಪಟ್ಟಿದ್ದಾಳೆ. ಇನ್ನಿಬ್ಬರು ಹೆಣ್ಣುಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

Chhattisgarh Constable's Lover Stabs His Wife, Son To Death
ವಿಜಯಪುರದಲ್ಲಿ ಥಾರ್​​ಗೆ ಟ್ರಕ್ ಡಿಕ್ಕಿ ಹೊಡೆಸಿ ಹತ್ಯೆ: ಸಿನಿಮಾ ಸ್ಟೈಲ್​​ ಕೊಲೆ ಕೇಸ್​ ಭೇದಿಸಿದ ಪೊಲೀಸರು; ಆರು ಜನರ ಬಂಧನ

ವಿಪರ್ಯಾಸವೆಂದರೆ ಸರೋಜಿನಿ ಈ ರೀತಿ ದಾಳಿ ಮಾಡುವಾಗ ಲಲಿತೇಶ್ ಕೂಡ ಅಲ್ಲಿಯೇ ಇದ್ದ. ತನ್ನ ಮಕ್ಕಳ ಮೇಲೆ ಚಾಕುವಿನಿಂದ ಇರಿಯುವಾಗಲೂ ಆತ ಆಕೆಯನ್ನು ತಡೆಯಲಿಲ್ಲ. ಮಕ್ಕಳಿಗೆ ಇರಿಯುವುದನ್ನು ನೋಡಿದ ರೀನಾ ತನ್ನ ಗಂಡನ ಬಳಿ ಮಕ್ಕಳನ್ನು ಕಾಪಾಡುವಂತೆ ಗೋಗರೆದಿದ್ದಾಳೆ. ತನ್ನ ನೋವಿನ ನಡುವೆಯೂ ರೀನಾ ತನ್ನ ಮಕ್ಕಳಾದ ನೈನಾ ಮತ್ತು ತಾನಿಯಾರನ್ನು ಬಾತ್​​ರೂಂನಲ್ಲಿ ಲಾಕ್ ಮಾಡಿ ಸರೋಜಿನಿಯಿಂದ ಕಾಪಾಡಲು ಪ್ರಯತ್ನಿಸಿದ್ದಾಳೆ. ಮಕ್ಕಳನ್ನು ಏನೂ ಮಾಡಬೇಡ ಎಂದು ಸರೋಜಿನಿಯ ಕಾಲು ಹಿಡಿದು ಬೇಡಿಕೊಂಡಿದ್ದಾಳೆ.

ಅಷ್ಟರಲ್ಲಿ ಗಲಾಟೆ ಕೇಳಿ ಅಕ್ಕಪಕ್ಕದ ಫ್ಲಾಟ್​ನವರು ಬಂದ ಕಾರಣದಿಂದ ಆ ಇಬ್ಬರು ಹೆಣ್ಣುಮಕ್ಕಳ ಜೀವ ಉಳಿದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ ಅಕ್ಕಪಕ್ಕದವರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಲಿತೇಶ್ ಯಾದವ್ ಮತ್ತು ಸರೋಜಿನಿಯನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com