ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! 1 ವರ್ಷದ ಸ್ನಾತಕೋತ್ತರ ಪದವಿ ಇಂಟ್ರೊಡ್ಯೂಸ್ ಮಾಡಿದ UGC

ಉನ್ನತ ಶಿಕ್ಷಣ ಪಡೆದು ತಮ್ಮ ವೃತ್ತಿಜೀವನದಲ್ಲಿ ಉನ್ನತ ಎತ್ತರಕ್ಕೇರಲು ಬಯಸುವ ಅಭ್ಯರ್ಥಿಗಳಿಗೆ UGC ಒಂದು ಭರ್ಜರಿ ಸಿಹಿ ಸುದ್ದಿ ನೀಡಿದೆ. NEP 2020ರ ಅಡಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ 1 ವರ್ಷದ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಅಧಿಕೃತವಾಗಿ ಜಾರಿ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
From now on, you can complete your Master's in just one year!
ಇನ್ಮುಂದೆ ಒಂದೇ ವರ್ಷದಲ್ಲಿ ಮಾಸ್ಟರ್ಸ್ ಮುಗಿಸಬಹುದು!Online Desk
Updated on

ನವದೆಹಲಿ: ಪದವಿಯ ನಂತರ ಸ್ನಾತಕೋತ್ತರ ಪದವಿ (Master's Degree) ಮಾಡಬೇಕು ಅದರಲ್ಲೂ, ಸ್ನಾತಕೋತ್ತರ ಪದವಿ ಫುಲ್ ಟೈಮ್ ಮಾಡಬೇಕು ಅನ್ನೋದು ಹಲವರ ಕನಸು! ಆದ್ರೆ, ಅದಕ್ಕೆ ಎರಡು ವರ್ಷ ಟೈಮ್ ಕೊಡೋಕೆ ಅದೆಷ್ಟೋ ಜನರಿಗೆ ಸಾಧ್ಯವಾಗುವುದಿಲ್ಲ! ಈ ಕಾರಣದಿಂದ ಸ್ನಾತಕೋತ್ತರ ಪದವಿಯನ್ನು ಮಿಸ್ ಮಾಡಿಕೊಳ್ಳೋರೇ ಹೆಚ್ಚು! ಆದ್ರೆ, ಇದೀಗ UGC ಅಂದ್ರೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಮಾಸ್ಟರ್ ಪ್ಲಾನ್ ಮಾಡಿದ್ದು, ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ 1 ವರ್ಷದ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಅಧಿಕೃತವಾಗಿ ಜಾರಿ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು 1 ವರ್ಷದ ಸ್ನಾತಕೋತ್ತರ ಪದವಿ?

ವಿಶ್ವವಿದ್ಯಾಲಯ ಧನಸಹಾಯ ಆಯೋಗವು ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಯಾರು 4 ವರ್ಷಗಳ ಬ್ಯಾಚುಲರ್ಸ್ ಪದವಿ (Honours / Honours with Research) ಪೂರ್ಣಗೊಳಿಸಿದ್ದಾರೋ ಅಂತಹ ವಿದ್ಯಾರ್ಥಿಗಳು ಮಾತ್ರ 1 ವರ್ಷದ ಸ್ನಾತಕೋತ್ತರ ಪದವಿಗೆ ನೇರ ಪ್ರವೇಶ ಪಡೆಯಬಹುದಾದ ವ್ಯವಸ್ಥೆಯನ್ನು ಜಾರಿ ಮಾಡಿದೆ.

ಏತನ್ಮಧ್ಯೆ, ನೀವು ಸಾಮಾನ್ಯ 3 ವರ್ಷಗಳ ಡಿಗ್ರಿ ಮುಗಿಸಿದ್ದರೆ, ನಿಮಗೆ ಸಾಂಪ್ರದಾಯಿಕ 2 ವರ್ಷದ ಸ್ನಾತಕೋತ್ತರ ಪದವಿ ಕಡ್ಡಾಯವಾಗಿರುತ್ತದೆ. ಜೊತೆಗೆ, ಎಂಬಿಎ, ಎಂಸಿಎ ಮತ್ತು ಪಿಜಿಡಿಎಂನಂತಹ ವೃತ್ತಿಪರ ಕೋರ್ಸ್‌ಗಳ ಪ್ರವೇಶ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಂಸ್ಥೆಗಳು ಕೋರ್ಸ್ ಪ್ರಾರಂಭಿಸುವ ಮುನ್ನ ತಮ್ಮ ಶೈಕ್ಷಣಿಕ ಮಂಡಳಿಗಳಿಂದ ಪೂರ್ವ ಅನುಮೋದನೆ ಪಡೆಯುವುದು ಅಗತ್ಯವಾಗಿದೆ.

From now on, you can complete your Master's in just one year!
ಪಂಜಾಬ್ ವಿವಿಯಲ್ಲಿ ಘೋರ ದುರಂತ: ಕ್ಯಾಂಪಸ್‌ನಲ್ಲೇ ವಿದ್ಯುತ್ ತಗುಲಿ ಪಿಎಚ್‌ಡಿ ವಿದ್ಯಾರ್ಥಿನಿ ಸಾವು; ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

ಮುಂದುವರೆದು, ಇತ್ತೀಚಿನ ಯುಜಿಸಿ ಸುತ್ತೋಲೆಯ ಪ್ರಕಾರ, ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ತಮ್ಮ ಮುಕ್ತ ಮತ್ತು ದೂರಸ್ಥ ಶಿಕ್ಷಣ ಹಾಗೂ ಆನ್‌ಲೈನ್ ಮೋಡ್ ಮೂಲಕ 1 ವರ್ಷದ ಪಿಜಿ ಕೋರ್ಸ್‌ಗಳನ್ನು ಆಫರ್ ಮಾಡಲು ಅನುಮತಿ ನೀಡಲಾಗಿದೆ. ಜೊತೆಗೆ, ಇಂತಹ ಒಂದು ವರ್ಷದ ಪಿಜಿ ಕೋರ್ಸ್ ನೀಡಲು ಕಾಲೇಜುಗಳು UGCಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

3 ವರ್ಷ ಪದವಿ ಪಡೆದವರಿಗೂ 1 ವರ್ಷ ಪಿಜಿ?

3 ವರ್ಷ ಪದವಿ ಪಡೆದ ಸಾಮಾನ್ಯ ವಿದ್ಯಾರ್ಥಿಗಳು ಕೂಡ 1 ವರ್ಷ ಪಿಜಿ ಮಾಡಬೇಕು ಎಂದಾದರೆ, 1 ವರ್ಷದ ಪಿಜಿ ಡಿಪ್ಲೊಮಾವನ್ನು ಪರ್ಯಾಯ ಆಯ್ಕೆ ಮಾಡಿಕೊಳ್ಳಬಹುದು. ಈ ವ್ಯವಸ್ಥೆ ಈಗಾಗಲೇ ಹಲವು ವಿಶ್ವವಿದ್ಯಾಲಯಗಳಲ್ಲಿ ಚಾಲ್ತಿ ಇದೆ.

From now on, you can complete your Master's in just one year!
ವಂದೇ ಮಾತರಂ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com