'ಲವರ್ ಜೊತೆ ಬದುಕಲು ಬಿಡಿ'; 5 ವರ್ಷದ ಮಗು ಸಹಿತ 120 ಅಡಿ ಮೊಬೈಲ್ ಟವರ್ ಏರಿದ ಮಹಿಳೆಯ ಹೈಡ್ರಾಮಾ! Video

ತನ್ನ ಪ್ರೇಮಿಯೊಂದಿಗೆ ಬದುಕಲು ಅವಕಾಶ ನೀಡುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ತಮ್ಮ ಐದು ವರ್ಷದ ಮಗುವಿನೊಂದಿಗೆ 120 ಅಡಿ ಎತ್ತರದ ಮೊಬೈಲ್ ಟವರ್ ಏರಿದ್ದರು.
Woman climbs a 120-foot mobile tower
ಟವರ್ ಏರಿದ ಮಹಿಳೆ
Updated on

ಗೊಂಡಾ: ತಾನು ಪ್ರೀತಿಸುತ್ತಿರುವ ಪ್ರೇಮಿಯೊಂದಿಗೆ ಜೀವನ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಮಹಿಳೆಯೊಬ್ಬಳು ಮಗು ಸಮೇತ ಮೊಬೈಲ್ ಟವರ್ ಏರಿದ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.

ತನ್ನ ಪ್ರೇಮಿಯೊಂದಿಗೆ ಬದುಕಲು ಅವಕಾಶ ನೀಡುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ತಮ್ಮ ಐದು ವರ್ಷದ ಮಗುವಿನೊಂದಿಗೆ 120 ಅಡಿ ಎತ್ತರದ ಮೊಬೈಲ್ ಟವರ್ ಏರಿದ್ದರು.

ಮಾಹಿತಿಯ ಪ್ರಕಾರ, ಮಹಿಳೆ ತನ್ನ ಪ್ರೇಮಿಯೊಂದಿಗೆ ವಾಸಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ, ಪ್ರತಿಭಟನೆಯ ರೂಪವಾಗಿ ಮೊಬೈಲ್ ಟವರ್ ಏರಿದ್ದರು. ಈ ವೇಳೆ ಅವರೊಂದಿಗೆ ಐದು ವರ್ಷದ ಮಗು ಕೂಡ ಇದ್ದುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಯಿತು.

Woman climbs a 120-foot mobile tower
ವರದಕ್ಷಿಣೆ ಕಿರುಕುಳ; 3 ತಿಂಗಳ ಮಗು ಬಿಟ್ಟು ತಾಯಿ ಆತ್ಮಹತ್ಯೆ, ಕೊಲೆ ಎಂದು ಕುಟುಂಬಸ್ಥರ ಆರೋಪ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ಕೆಳಗಿಳಿಸಿ ರಕ್ಷಿಸಲಾಯಿತು.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಹಿಳೆಯ ಮನವಿಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮಗುವಿನ ಸುರಕ್ಷತೆಯನ್ನು ಪಣಕ್ಕಿಟ್ಟು ಇಂತಹ ಕ್ರಮ ಕೈಗೊಂಡಿರುವುದರ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com