ಬೆಳಗಾವಿ: ಬಿಜೆಪಿ ಶಾಸಕರೊಬ್ಬರು ಗುರುವಾರ ಪ್ರಚೋದನಕಾರಿ ಭಾಷಣ ಮಾಡಿದ್ದು, ವಿಧಾನಸಭೆ ಚುವಾವಣೆ ರಸ್ತೆ, ಕುಡಿಯುವ ನೀರು ಮತ್ತು ಇತರೆ ವಿಷಗಳ ಮೇಲೆ ನಡೆಯುತ್ತಿಲ್ಲ. ಇದು ಹಿಂದೂ v/s ಮುಸ್ಲಿಂ, ರಾಮ ಮಂದಿರ v/s ಬಾಬ್ರಿ ಮಸೀದಿ ಚುನಾವಣೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಸೂಳೆಬಾವಿ ಗ್ರಾಮದಲ್ಲಿ ಪ್ರಚಾರದ ವೇಳೆ ಈ ಉಗ್ರ ಸ್ವರೂಪದ ಭಾಷಣ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಯೂ ವ್ಯಕ್ತವಾಗಿದೆ.
'ಈ ಚುನಾವಣೆ ರಸ್ತೆ, ಕುಡಿಯುವ ನೀರು ಮತ್ತಪು ಅಭಿವೃದ್ದಿಯ ಕುರಿತಾಗಿದ್ದಲ್ಲ. ನಿಮಗೆ ರಾಮ ಮಂದಿರ ಬೇಕಾದರೆ ಬಿಜೆಪಿಗೆ ಮತ ಹಾಕಿ. ಸಂಜಯ್ ಪಾಟೀಲ್ ಅನ್ನುವುದನ್ನು ನೋಡಬೇಡಿ' ಎಂದಿದ್ದಾರೆ.
ನೀವು ಟಿಪ್ಪು ಜಯಂತಿ, ಬಾಬ್ರಿ ಮಸೀದಿ ಬೇಕಾದ್ರೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮತ ಹಾಕಿ . ಆವರು ಹೆಳ್ತಾರಾ.. ಮಂದಿರ ಕಟ್ತೇನೆ ಅಂತ, ಸಾಧ್ಯ ಇಲ್ಲ ಅವರು ಮಸೀದಿ ಕಟ್ಟುವುದು ಎಂದಿದ್ದಾರೆ.
This election is not about roads, water or other issues.This election is about Hindus vs Muslims, Ram Mandir vs Babri Masjid: BJP MLA Sanjay Patil in Belagavi. #KarnatakaElections2018 (17.4.18) pic.twitter.com/yZmGrJBs2f