ಅಂತೆಯೇ ರಾಜಕೀಯ ಅನ್ನೋದು ಅಷ್ಟು ಸುಲಭದ ವಿಷಯ ಅಲ್ಲ. ಅಂಬರೀಷ್ ಕಾಂಗ್ರೆಸ್‌ನಿಂದಲೇ ಗುರುತಿಸಿಕೊಂಡವರು. ಹಾಗಾಗಿ ಕಾಂಗ್ರೆಸ್ ಮುಖಂಡರ ಸಲಹೆ ಪಡೆಯುತ್ತೇನೆ. ನಮ್ಮದೂ ಕಾಂಗ್ರೆಸ್ ಪಕ್ಷವೇ, ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಈಗ ಯಾವುದೇ ವಿವಾದ ಬೇಡ. ನನಗೆ ರಾಜಕೀಯಕ್ಕೆ ಬರುವ ವಿಚಾರ ಇರಲಿಲ್ಲ. ಒಂದು ವೇಳೆ ನಾನು ರಾಜಕೀಯಕ್ಕೆ ಬರುವುದೇ ಆದರೆ ಅದು ಮಂಡ್ಯದಿಂದ ಮಾತ್ರ. ಕಾಂಗ್ರೆಸ್ ಕಾರ್ಯಕರ್ತರು ಬಂದು ಚುನಾವಣೆಗೆ ನಿಲ್ಲುವಂತೆ ಕೇಳಿದ್ದಾರೆ. ಅಭಿಮಾನಿಗಳ ಆಸೆ ನಮ್ಮ ಅವರ ಸಂಬಂಧ ಮುಂದುವರಿಯಬೇಕು ಎನ್ನುತ್ತಿದ್ದಾರೆ. ಈ ಜನರು ಅಂಬರೀಷ್ ಸಂಪಾದಿಸಿದ ಆಸ್ತಿ. ಇದನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ರಾಜಕೀಯಕ್ಕೆ ಬರಬೇಕೆನ್ನುವ ಆಸೆ ಇಲ್ಲ. ಈಗ ನಾನು ಯೋಚನೆ ಮಾಡಬೇಕು. ಎಲ್ಲರ ಸಲಹೆಗಳನ್ನು ಪಡೆದು ತೀರ್ಮಾನ ಪ್ರಕಟಿಸುತ್ತೇನೆ ಎಂದರು.