ಇಡಿ ಗೆ ಹೆಸರು ಹೇಳುವುದಾಗಿ ಸೋನಿಯಾ ಗಾಂಧಿಗೆ ಹೆದರಿಸಿ ಕೆಪಿಸಿಸಿ ಅಧ್ಯಕ್ಷನಾಗಿದ್ದಾನೆ: ಡಿಕೆಶಿ ವಿರುದ್ಧ ಜಾರಕಿಹೊಳಿ ವಾಗ್ದಾಳಿ

ಅಧ್ಯಕ್ಷ ಸ್ಥಾನ ನೀಡದಿದ್ದರೆ ಇಡಿಗೆ ನಿಮ್ಮ ಹೆಸರು ಹೇಳುತ್ತೇನೆಂದು ತಿಹಾರ್​ ಜೈಲಿನಲ್ಲಿ ಸೋನಿಯಾಗೆ ಹೆದರಿಸಿ ಪಕ್ಷದ ಅಧ್ಯಕ್ಷ ಆಗಿದ್ದಾನೆ ಎಂದು ಡಿಸಿಎಂ ವಿರುದ್ಧ ಏಕವಚನದಲ್ಲಿಯೇ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
Updated on

ಬೆಳಗಾವಿ: ಅಧ್ಯಕ್ಷ ಸ್ಥಾನ ನೀಡದಿದ್ದರೆ ಇಡಿಗೆ ನಿಮ್ಮ ಹೆಸರು ಹೇಳುತ್ತೇನೆಂದು ತಿಹಾರ್​ ಜೈಲಿನಲ್ಲಿ ಸೋನಿಯಾಗೆ ಹೆದರಿಸಿ ಪಕ್ಷದ ಅಧ್ಯಕ್ಷ ಆಗಿದ್ದಾನೆ ಎಂದು ಡಿಸಿಎಂ ವಿರುದ್ಧ ಏಕವಚನದಲ್ಲಿಯೇ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು ಅಧ್ಯಕ್ಷ ಸ್ಥಾನ ನೀಡದಿದ್ದರೆ ಇಡಿಗೆ ನಿಮ್ಮ ಹೆಸರು ಹೇಳುತ್ತೇನೆಂದು ತಿಹಾರ್​ ಜೈಲಿನಲ್ಲಿ ಸೋನಿಯಾಗೆ ಹೆದರಿಸಿ ಪಕ್ಷದ ಅಧ್ಯಕ್ಷ ಆಗಿದ್ದಾನೆ ಎಂದು ಡಿಸಿಎಂ ವಿರುದ್ಧ ಏಕವಚನದಲ್ಲಿಯೇ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಡಿಕೆ ಶಿವಕುಮಾರ್​ ಬಹಳ ವೀಕ್ ಮನುಷ್ಯ, ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಇಷ್ಟು ದಿನ ನಾನು ಸುಮ್ಮನಿದ್ದೆ, ಈಗ ಸೀರಿಯಸ್‌ ಆಗಿ ತೆಗೆದುಕೊಂಡಿದ್ದೇನೆ. ಸರ್ಕಾರ ನಮ್ಮ ಅರ್ಜಿ ನೆಗ್ಲೆಟ್ ಮಾಡಿದ್ರೆ, ಹೈಕೋರ್ಟ್, ಸುಪ್ರೀಂ ಕೋರ್ಟ್ ಹೋಗುತ್ತೇನೆ ಎಂದರು.

ಅಸ್ಸಾಂ, ಗುಹಾವಟಿ ಮೂಲಕ ನನಗೆ ಕರೆ ಬರುತ್ತಿವೆ. ಟೆರರಿಸ್ಟ್ ಲಿಂಕ್ ಮಾಡಿ ನನ್ನನ್ನು ಅರೆಸ್ಟ್ ಮಾಡಿಸುವ ಹಂತಕ್ಕೆ ಹೋಗುತ್ತಾನೆ. ಅದಕ್ಕೆ ನನ್ನ ಪೋನ್​ನಲ್ಲಿ ಇಂಟರ್ನೆಟ್ ಇಟ್ಟಿಲ್ಲ. ದುಬೈ, ಯುಎಇ ಕಡೆಯಿಂದಲೂ ಪೋನ್ ಬರುತ್ತಿವೆ. ನನಗೆ ಬಹಳ ಟಾರ್ಚರ್ ಕೊಟ್ಟಿದ್ದಾರೆ.

ಬೇರೆ ಯಾರಾದರೂ ಆಗಿದ್ದರೆ  ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅವನ ವಿರುದ್ಧ ಸಾಕ್ಷಿಗಳಿದ್ದು, ತನಿಖೆಯನ್ನು ಸಿಬಿಐಗೆ ಕೊಟ್ಟರೆ ಒದಗಿಸುತ್ತೇನೆ‌. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಡಿಕೆ ಶಿವಕುಮಾರ್​ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಡಿ ಕೇಸ್​ನಲ್ಲಿ ಕಾರು ಚಾಲಕ ಪರಶಿವಮೂರ್ತಿಯನ್ನು ಏಕೆ ವಿಚಾರಣೆಗೆ ಒಳಪಡಿಸಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಯಾಕೆ ವಿಚಾರಣೆ ಮಾಡಲಿಲ್ಲ. ನನ್ನ ಮಾತಿನಿಂದ ಭಾರತೀಯ ಜನತಾ ಪಕ್ಷಕ್ಕೆ ಮುಜುಗರ ಆಗೋದು ಬೇಡ, ಪರೋಕ್ಷವಾಗಿ ಬಿಜೆಪಿ ನಾಯಕರು ಸಿಡಿ ಕೇಸ್​ನಲ್ಲಿ ಇದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ನಾಲ್ಕು ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಅಂತ್ಯವಾದ್ರೆ ಒಳ್ಳೆಯದು, ಡಿ.ಕೆ.ಶಿವಕುಮಾರ್ ಸಿಡಿ ಫ್ಯಾಕ್ಟರಿ ಬಂದ್ ಆಗಬೇಕಂದ್ರೆ ಸಿಬಿಐಗೆ ವಹಿಸಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com