ಇಂದು ಚಂದ್ರಗ್ರಹಣ: ಭಾರತ ಪೂರ್ವ ಭಾಗದಲ್ಲಿ ಗೋಚರ

ಈ ವರ್ಷದ ಮೊದಲ ಪೂರ್ಣ ಚಂದ್ರ ಗ್ರಹಣವು ಶನಿವಾರ ಸಂಭವಿಸಲಿದ್ದು, ಭಾರತದ ಪೂರ್ವ ಭಾಗದ ಕೆಲವೆಡೆ ಗೋಚರವಾಗುವ ಸಾಧ್ಯತೆ ಇದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಕೋಲ್ಕತ್ತ : ಈ ವರ್ಷದ ಮೊದಲ ಪೂರ್ಣ ಚಂದ್ರ ಗ್ರಹಣವು ಶನಿವಾರ  ಸಂಭವಿಸಲಿದ್ದು, ಭಾರತದ ಪೂರ್ವ ಭಾಗದ ಕೆಲವೆಡೆ ಗೋಚರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಾಹ್ನ 3.45ರಿಂದ ಗ್ರಹಣ ಆರಂಭವಾಗುತ್ತದೆ.  ಸಂಜೆ 5.27ಕ್ಕೆ ಗ್ರಹಣವು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿಕೊಳ್ಳುತ್ತದೆ. ಈ ಸ್ಥಿತಿ 5.32ರ ವರೆಗೂ ಇರುತ್ತದೆ. ನಂತರ ಭಾಗಶಃ ಗ್ರಹಣವು ರಾತ್ರಿ 7.14ರ ವರೆಗೂ ಗೋಚರಿಸುತ್ತದೆ.

ಅರುಣಾಚಲಪ್ರದೇಶದ ಪೂರ್ವ ಭಾಗದ ಕೆಲವೆಡೆ ಗೋಚರಿಸಲಿದ್ದು, ತೇಜು ಮತ್ತು ರೋಯಿಂಗ್‌ನಲ್ಲಿ ಚಂದ್ರೋದಯವಾದ ಕೂಡಲೇ ಸುಮಾರು 4 ನಿಮಿಷ 43 ಸೆಕೆಂಡ್‌ಗಳ  ಕಾಲ ಸಂಪೂರ್ಣ ಚಂದ್ರಗ್ರಹಣ ಕಾಣಿಸಲಿದೆ. ದೇಶದ ಇತರ ಭಾಗಗಳಲ್ಲಿ ಚಂದ್ರಗ್ರಹಣವು ಭಾಗಶಃ ಗೋಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com